varthabharthi

ಕರಾವಳಿ

ಡೈಮಂಡ್ ಇಂಟರ್ ನ್ಯಾಷನಲ್ ಸ್ಕೂಲ್: ಶಿಕ್ಷಕ-ರಕ್ಷಕರ ಸಭೆ

ವಾರ್ತಾ ಭಾರತಿ : 12 Oct, 2018

ಮಂಗಳೂರು, ಅ. 12: ಡೈಮಂಡ್ ಇಂಟರ್ ನ್ಯಾಷನಲ್ ಶಾಲೆಯ ಶಿಕ್ಷಕ-ರಕ್ಷಕ ಸಭೆಯು ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಡೈಮಂಡ್ ಎಜುಕೇಶನಲ್ ಟ್ರಸ್ಟ್ ಸಲಹಾ ಸಮಿತಿ ಸದಸ್ಯ ಬಾವಾಕ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಆಕ್ಸಸ್ ಇಂಡಿಯಾ ಇದರ ಹಿರಿಯ ತರಬೇತುದಾರ ಫಯಾಝ್ ದೊಡ್ಡಮನೆ ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಹೆತ್ತವರ ಪಾತ್ರ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡುತ್ತಾ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಹೆತ್ತವರು ಬಹಳ ಜಾಗರೂಕವಾಗಿ ನಿಭಾಯಿಸಬೇಕು, ಮಕ್ಕಳಿಗೆ ತಮ್ಮ ಜೀವನದಲ್ಲಿ ‌ಯಾವ ರೀತಿಯ ಗುರಿಯನ್ನು ಹೊಂದಬೇಕೆನ್ನುವ ಕುರಿತು ಮಾರ್ಗದರ್ಶನ ನೀಡಿದರು. ಸನಾ ವ್ಯವಸ್ಥಾಪಾಕಿ ಟ್ರಸ್ಟಿ ಡೈಮಂಡ್ ಎಜುಕೇಶನಲ್ ಶಾಲಾ ಚಟುವಟಿಕೆಗಳ ಕುರಿತು ಹೆತ್ತವರೊಂದಿಗೆ ಸಮಾಲೋಚನೆ ನಡೆಸಿದರು.

ಟ್ರಸ್ಟ್ ಚೇರ್ಮನ್ ಸಲೀಮ್ ಅಲ್ತಾಫ್ ಡೈಮಂಡ್, ಪ್ರೊ. ಅಬೂಬಕರ್ ತುಂಬೆ, ಕಾರ್ಯನಿರ್ವಾಹಕ ರಿಝ್ವಾನ್ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)