ವಿದ್ಯುತ್ ಕಂಬಕ್ಕೆ ಟೆಂಪೊ ಢಿಕ್ಕಿ: ಮೆಸ್ಕಾಂಗೆ ಸಾವಿರಾರು ರೂ. ನಷ್ಟ
ಮಂಗಳೂರು, ಅ.12: ನಗರದ ಬಿಜೈ ಭಾರತೀನಗರ ಬಳಿ ರಸ್ತೆಬದಿ ಅಳವಡಿಸಿದ್ದ ವಿದ್ಯುತ್ ಕಂಬಕ್ಕೆ ಅಪರಿಚಿತ ಗೂಡ್ಸ್ ಟೆಂಪೊ ಢಿಕ್ಕಿ ಹೊಡೆದ ಪರಿಣಾಮ ಮೆಸ್ಕಾಂ ಇಲಾಖೆಗೆ ಸಾವಿರಾರು ರೂ. ಹಾನಿಯಾದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಅಪರಿಚಿತ ಗೂಡ್ಸ್ ಟೆಂಪೊ ಢಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಜಖಂಗೊಂಡಿದೆ. ಘಟನೆ ಬಳಿಕ ಟೆಂಪೊ ಸ್ಥಳದಿಂದ ಪರಾರಿಯಾಗಿದೆ. ಮೆಸ್ಕಾಂ ಇಲಾಖೆಗೆ 12 ಸಾವಿರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
Next Story