varthabharthi

ರಾಷ್ಟ್ರೀಯ

‘ಮೀಟೂ’ ಚಳವಳಿ

ಸತ್ಯವನ್ನು ಗಟ್ಟಿಯಾಗಿ, ಸ್ಪಷ್ಟವಾಗಿ ಹೇಳುವ ಅಗತ್ಯತೆ ಇದೆ: ರಾಹುಲ್ ಗಾಂಧಿ

ವಾರ್ತಾ ಭಾರತಿ : 12 Oct, 2018

ಹೊಸದಿಲ್ಲಿ, ಅ. 12: ಮಿ ಟು ಚಳವಳಿಗೆ ಶುಕ್ರವಾರ ಬೆಂಬಲ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಹಿಳೆಯರನ್ನು ಗೌರವ ಹಾಗೂ ಘನತೆಯಿಂದ ನಡೆಸಿಕೊಳ್ಳುವುದನ್ನು ಪ್ರತಿಯೊಬ್ಬರು ಕಲಿಯಬೇಕಾದ ಸಮಯ ಬಂದಿದೆ ಎಂದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಮಾಜಿ ಸಂಪಾದಕ ಹಾಗೂ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಎ.ಜೆ. ಅಕ್ಬರ್ ವಿರುದ್ಧದ ಆರೋಪದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಮಹಿಳೆಯರನ್ನು ಪ್ರತಿಯೊಬ್ಬರು ಗೌರವ ಹಾಗೂ ಘನತೆಯಿಂದ ನೋಡಿಕೊಳ್ಳುವುದನ್ನು ಕಲಿಯಬೇಕಾದ ಸಮಯ ಬಂದಿದೆ. ಬದಲಾವಣೆ ತರಲು ಸತ್ಯವನ್ನು ಗಟ್ಟಿಯಾಗಿ ಹಾಗೂ ಸ್ಪಷ್ಟವಾಗಿ ಹೇಳಬೇಕಾದ ಅಗತ್ಯತೆ ಇದೆ ಎಂದು ಮಿ ಟು ಹ್ಯಾಷ್‌ಟ್ಯಾಗ್‌ನೊಂದಿಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಎಂ.ಜೆ. ಅಕ್ಬರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ಹೆಚ್ಚುತ್ತಿದೆ. ಆರೋಪದ ಕುರಿತು ಎಂ.ಜೆ. ಅಕ್ಬರ್ ಅವರು ಸ್ಪಷ್ಟನೆ ನೀಡುವಂತೆ ಇಲ್ಲದೇ ಇದ್ದರೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ನಾಯಕ ಜಯಪಾಲ್ ರೆಡ್ಡಿ ಅವರು ಆಗ್ರಹಿಸಿದ್ದಾರೆ. ಆದಾಗ್ಯೂ, ಈ ವಿಷಯದ ಬಗ್ಗೆ ಸರಕಾರ ಅಥವಾ ಬಿಜೆಪಿ ಸ್ಪಷ್ಟನೆ ನೀಡಿಲ್ಲ. ವಿದೇಶದಿಂದ ಭಾರತಕ್ಕೆ ಮರಳಿ ಬಂದ ಬಳಿಕ ಅಕ್ಬರ್ ಅವರನ್ನು ಬಿಜೆಪಿಯ ಹಿರಿಯ ನಾಯಕರು ವಿವರಣೆ ಕೋರಲಿದ್ದಾರೆ ಎಂಬ ವದಂತಿ ಇದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)