varthabharthi

ರಾಷ್ಟ್ರೀಯ

ನಿರೀಕ್ಷಣಾ ಜಾಮೀನು ಕೋರಿ ನಕ್ಕೀರನ್ ಉದ್ಯೋಗಿಗಳು ಹೈಕೋರ್ಟ್‌ಗೆ

ವಾರ್ತಾ ಭಾರತಿ : 12 Oct, 2018

ಚೆನ್ನೈ, ಅ. 12: ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರ ಬಗ್ಗೆ ಲೇಖನ ಪ್ರಕಟಿಸಿದ ಕುರಿತಂತೆ ಮ್ಯಾಗಝಿನ್‌ನ ಸಂಪಾದಕ ಮತ್ತು ತಮ್ಮ ವಿರುದ್ದ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಪತ್ರಕರ್ತರ ಸಹಿತ ನಕ್ಕೀರನ್ ಪತ್ರಿಕೆಯ 35 ಉದ್ಯೋಗಿಗಳು ನಿರೀಕ್ಷಣಾ ಜಾಮೀನು ಕೋರಿ ಮದ್ರಾಸ್ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ನಕ್ಕೀರನ್ ಪತ್ರಿಕೆಯ ಲೇಖನದ ವಿರುದ್ಧ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾದ ಪ್ರಥಮ ಮಾಹಿತಿ ವರದಿಯಲ್ಲಿ ಉದ್ಯೋಗಿಗಳನ್ನು ಹೆಸರಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಸಂಪಾದಕ ಆರ್. ಗೋಪಾಲನ್ ಅವರನ್ನು ಬಂಧಿಸಲಾಗಿತ್ತು ಹಾಗೂ ಅನಂತರ ಬಿಡುಗಡೆಗೊಳಸಲಾಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)