varthabharthi

ಕರಾವಳಿ

ಬೆಳಗುಂಡಿ ದೇವಸ್ಥಾನ ರಸ್ತೆಗೆ 5ಲಕ್ಷ ರೂ. ಅನುದಾನ: ಕರಂದ್ಲಾಜೆ

ವಾರ್ತಾ ಭಾರತಿ : 12 Oct, 2018

ಹೆಬ್ರಿ, ಅ.12: ಜೀರ್ಣೋದ್ಧಾರ ಸಂಭ್ರಮದಲ್ಲಿರುವ ಮುದ್ರಾಡಿ ಬೆಳಗುಂಡಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಸದೆ ಶೋಭಾ ಕಂದ್ಲಾಜೆ ಬುಧವಾರ ಭೇಟಿ ನೀಡಿದರು.

ದೇವಸ್ಥಾನದ ಸಂಪರ್ಕ ರಸ್ತೆಗೆ ಸಂಸದರ ನಿಧಿಯಿಂದ 5 ಲಕ್ಷ ರೂ. ಅನು ದಾನ ನೀಡಿರುವುದನ್ನು ಸಂಸದೆ ಶೋಭಾ ಕರಂದ್ಲಾಜೆ ಈ ಸಂದರ್ಭದಲ್ಲಿ ಪ್ರಕಟಿಸಿದರು. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹೆಚ್ಚಿನ ಧನಸಹಾಯ ನೀಡು ವಂತೆ ಸಂಸದೆಗೆ ಮನವಿ ಸಲ್ಲಿಸಲಾಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಾಂಡುಂಗ ಪ್ರಭು, ಜೀರ್ಣೋ ದ್ಧಾರ ಸಮಿತಿಯ ಅಧ್ಯಕ್ಷ ಮುದ್ರಾಡಿ ದಿವಾಕರ ಎನ್.ಶೆಟ್ಟಿ, ಉಪಾಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಪ್ರಚಾರ ಸಮಿತಿಯ ಅಧ್ಯಕ್ಷ ಗಣಪತಿ ಎಂ., ಮುದ್ರಾಡಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ಡಿ.ಪೂಜಾರಿ, ಬಿಜೆಪಿ ನಾಯಕ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿಪಂ ಸದಸ್ಯೆ ಜ್ಯೋತಿ ಹರೀಶ ಪೂಜಾರಿ, ತಾಪಂ ಸದಸ್ಯ ರಮೇಶ ಕುಮಾರ್ ಶಿವಪುರ, ಉದ್ಯಮಿ ಎಚ್. ಸತೀಶ ಪೈ, ವಕೀಲ ಭರತ ಶೆಟ್ಟಿ, ಗ್ರಾಪಂ ಸದಸ್ಯ ಸಂತೋಷ ಕುಮಾರ್ ಶೆಟ್ಟಿ, ವರಂಗ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ಬಾಯರಿ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)