varthabharthi

ಕರಾವಳಿ

ಚರಂಡಿಗೆ ಬಿದ್ದ ಕಾರು: ಮೂವರಿಗೆ ಗಾಯ

ವಾರ್ತಾ ಭಾರತಿ : 12 Oct, 2018

ಬ್ರಹ್ಮಾವರ, ಅ.12: ಹೇರಾಡಿ ಗ್ರಾಮದ ಕೂಡ್ಲಿ ಕ್ರಾಸ್ ಬಸ್ ನಿಲ್ದಾಣದ ಬಳಿ ಅ.12ರಂದು ನಸುಕಿನ ವೇಳೆ ಕಾರೊಂದು ಚರಂಡಿಗೆ ಬಿದ್ದ ಪರಿಣಾಮ ಮೂವರು ಗಾಯಗೊಂಡ ಬಗ್ಗೆ ವರದಿಯಾಗಿದೆ.

ಕಾರು ಚಾಲಕ ದಿವಾಕರ ಶೆಟ್ಟಿ, ಕಾರಿನಲ್ಲಿದ್ದ ಸುಗುಣ ಶೆಟ್ಟಿ, ಚಂದನ ಶೆಟ್ಟಿ ಎಂಬವರು ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂದಾರ್ತಿ ಕಡೆಯಿಂದ ಬ್ರಹ್ಮಾವರ ಕಡೆಗೆ ಹೋಗುತ್ತಿದ್ದ ಕಾರು ಚಾಲಕನ ಹತೋಟಿ ತಪ್ಪಿಚರಂಡಿಗೆ ಮಗುಚಿ ಬಿತ್ತೆನ್ನಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)