varthabharthi

ಕರಾವಳಿ

ಗಂಡನ ಮನೆಯವರಿಂದ ಹಿಂಸೆ ಆರೋಪ: ದೂರು

ವಾರ್ತಾ ಭಾರತಿ : 12 Oct, 2018

ಮಲ್ಪೆ, ಅ.12: ಅಂಬಲಪಾಡಿ ಬಂಕೇರಕಟ್ಟ ನಿವಾಸಿ ಸಲ್ವಾ (21) ಎಂಬವರಿಗೆ ಆಕೆಯ ಗಂಡ ಮನೆಯವರು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2017ರಲ್ಲಿ ಸಲ್ವಾ ಮಲ್ಪೆವಡಬಾಂಡೇಶ್ವರದ ತೌಸಿಫ್ ಎಂಬವರನ್ನು ಮದುವೆಯಾಗಿದ್ದು, ತೌಸಿಫ್ ವಿದೇಶಕ್ಕೆ ತೆರಳಿದ ನಂತರ ಗಂಡ ಮನೆಯವರು ಮನೆಯಿಂದ ಹೊರಗೆ ಹಾಕುವ ಉದ್ದೇಶದಿಂದ ಮಾನಸಿಕ ಕಿರುಕುಳ ಹಾಗೂ ದೈಹಿಕ ಹಲ್ಲೆ ಮಾಡಿರುವುದಾಗಿ ನ್ಯಾಯಾಲಯದ ಖಾಸಗಿ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)