varthabharthi

ರಾಷ್ಟ್ರೀಯ

4 ಸಾವಿರ ಉರ್ದು ಅದ್ಯಾಪಕರ ನೇಮಕಾತಿ ರದ್ದುಗೊಳಿಸಿದ ಆದಿತ್ಯನಾಥ್ ಸರಕಾರ

ವಾರ್ತಾ ಭಾರತಿ : 12 Oct, 2018

ಲಕ್ನೋ, ಅ. 12: ಅಲ್ಪಸಂಖ್ಯಾತರ ವಿರುದ್ಧದ ಇನ್ನೊಂದು ನಡೆಯಲ್ಲಿ ಆದಿತ್ಯನಾಥ್ ಸರಕಾರ 4,000 ಉರ್ದು ಅದ್ಯಾಪಕರ ನೇಮಕಾತಿ ರದ್ದುಗೊಳಿಸಿದೆ.

ಪ್ರಾಥಮಿಕ ಶಾಲೆಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಉರ್ದು ಅದ್ಯಾಪಕರನ್ನು ನೇಮಕ ಮಾಡಲಾಗಿದೆ. ಆದುದರಿಂದ ಇನ್ನಷ್ಟು ಅದ್ಯಾಪಕರ ನೇಮಕ ಮಾಡುವ ಅಗತ್ಯತೆ ಇಲ್ಲ ಎಂದು ಸರಕಾರ ಹೇಳಿದೆ.

ಅಖಿಲೇಶ್ ಸರಕಾರದ ಆಡಳಿತ ಇರುವಾಗ ಕಳೆದ ವರ್ಷ ಉರ್ದು ಅದ್ಯಾಪಕರ ಹುದ್ದೆಗೆ ನೇಮಕಾತಿ ಆರಂಭವಾಗಿತ್ತು. ಅದ್ಯಾಪಕರ 16460 ಖಾಲಿ ಹುದ್ದೆಗಳಲ್ಲಿ ಉರ್ದು ಅದ್ಯಾಪಕರ 4000 ಹುದ್ದೆಗಳನ್ನು ಪ್ರತ್ಯೇಕಿಸಲಾಗಿತ್ತು. ಈ 4000 ಹುದ್ದೆಗಳ ನೇಮಕಾತಿಗೆ ಆಗಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ 2016 ಸೆಬ್ಟಂಬರ್ 15ರಂದು ಅನುಮೋದನೆ ನೀಡಿದ್ದರು.

ನೇಮಕಾತಿಗೆ ಅಭ್ಯರ್ಥಿಗಳಿಂದ 2017 ಜನವರಿ 9ರ ವರೆಗೆ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. 2017 ಮಾರ್ಚ್‌ನಲ್ಲಿ ಕೌನ್ಸಿಲಿಂಗ್ ದಿನಾಂಕವನ್ನು ನೀಡಲಾಗಿತ್ತು. ಆದರೆ, ಹಳೆ ಸರಕಾರ ಹೋಗಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದಾಗ ಈ ನೇಮಕಾತಿ ರದ್ದುಗೊಳಿಸಿದೆ.

 ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು 2018 ಎಪ್ರಿಲ್ 15ರಂದು ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಎರಡು ತಿಂಗಳ ಒಳಗೆ ನೇಮಕಾತಿ ನಡೆಸುವಂತೆ ಹೈಕೋರ್ಟ್ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ, ಇದುವರೆಗೆ ನೇಮಕಾತಿ ನಡೆದಿಲ್ಲ. ಆದರೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಪ್ರಭಾತ್ ಕುಮಾರ್ ನೋಟಿಸು ಜಾರಿ ಮಾಡಿ ನೇಮಕಾತಿಯನ್ನು ರದ್ದುಗೊಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)