ಅಕ್ಬರ್ ತನ್ನ ಹೇಳಿಕೆಯನ್ನು ನೀಡಿದ್ದಾರೆ ಎಂದ ಬಿಜೆಪಿ
ಲೈಂಗಿಕ ಕಿರುಕುಳ ಆರೋಪ
ಹೊಸದಿಲ್ಲಿ,ಅ.15: ಕೇಂದ್ರ ಸಚಿವ ಎಂ.ಜೆ.ಅಕ್ಬರ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಬಿಜೆಪಿಯು,ವಿವಾದದ ಕುರಿತಂತೆ ಅವರು ತನ್ನ ಹೇಳಿಕೆಯನ್ನು ನೀಡಿದ್ದಾರೆ. ಪಕ್ಷವು ಅದನ್ನು ಒಪ್ಪುತ್ತದೋ ಇಲ್ಲವೋ ಎನ್ನುವುದು ಪ್ರಶ್ನೆಯಲ್ಲ ಎಂದು ಹೇಳಿದೆ.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ,ಹಲವಾರು ಮಹಿಳೆಯರು ತನ್ನ ಮೇಲೆ ಹೊರಿಸಿರುವ ಲೈಂಗಿಕ ಕಿರುಕುಳ ಆರೋಪಗಳ ಬಗ್ಗೆ ಅಕ್ಬರ್ ನೀಡಿರುವ ಹೇಳಿಕೆಯನ್ನು ಪಕ್ಷವು ಒಪ್ಪಿಕೊಳ್ಳುತ್ತದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ, ಒಪ್ಪಿಕೊಳ್ಳುವದು ಅಥವಾ ಒಪ್ಪಿಕೊಳ್ಳದಿರುವುದು ಇಲ್ಲಿ ಪ್ರಶ್ನೆಯಲ್ಲ. ಅವರು ತನ್ನ ಹೇಳಿಕೆಯನ್ನು ನೀಡಿದ್ದಾರೆ ಎಂದು ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹರಾವ್ ಉತ್ತರಿಸಿದರು.
ತನ್ನ ವಿರುದ್ಧದ ಆರೋಪಗಳನ್ನು ರವಿವಾರ ತಿರಸ್ಕರಿಸಿದ್ದ ಅಕ್ಬರ್,ಈ ಆರೋಪಗಳನ್ನು ಮಾಡಿರುವವರ ವಿರುದ್ಧ ಕಾನುನುಕ್ರಮವನ್ನು ಕೈಗೊಳ್ಳುವುದಾಗಿ ತಿಳಿಸಿದ್ದರು.
Next Story