93 ವರ್ಷದ ಅಜ್ಜಿ ‘ಮಿಸ್ ಹೋಲೊಕಾಸ್ಟ್ ಸರ್ವೈವರ್’
ಹೈಫ (ಇಸ್ರೇಲ್), ಅ. 15: ರವಿವಾರ ನಡೆದ ಇಸ್ರೇಲ್ನ ವಾರ್ಷಿಕ ಸೌಂದರ್ಯ ಸ್ಪರ್ಧೆಯಲ್ಲಿ 93 ವರ್ಷದ ತೋವಾ ರಿಂಗರ್ ‘ಮಿಸ್ ಹೋಲೊಕಾಸ್ಟ್ ಸರ್ವೈವರ್’ (ನಾಝಿಗಳು ನಡೆಸಿದ ಜನಾಂಗೀಯ ಹತ್ಯಾಕಾಂಡದಲ್ಲಿ ಬದುಕುಳಿದವರಲ್ಲಿ ಸುಂದರಿ) ಕಿರೀಟವನ್ನು ಗಳಿಸಿದರು.
ನಾಝಿಗಳು ನಡೆಸಿದ ಜನಾಂಗೀಯ ಹತ್ಯಾಕಾಂಡದ ಬರ್ಬರತೆಯನ್ನು ಸಹಿಸಿದ ಮಹಿಳೆಯರಿಗಾಗಿ ಈ ವಾರ್ಷಿಕ ಸೌಂದರ್ಯ ಸ್ಪರ್ಧೆಯನ್ನು ನಡೆಸಲಾಗುತ್ತದೆ.
ಇಸ್ರೇಲ್ನ ಹೈಫ ನಗರದಲ್ಲಿ ನಡೆದ ಸ್ಪರ್ಧೆಯಲ್ಲಿ 12 ಸ್ಪರ್ಧಿಗಳು ಭಾಗವಹಿಸಿದರು.
ಸ್ಪರ್ಧಿಗಳ ಹಲವು ತಲೆಮಾರುಗಳ ಸಂಬಂಧಿಕರು ಅವರನ್ನು ಉತ್ತೇಜಿಸಿದರು.
Next Story