ನಂದಿತಾ ದಾಸ್ ತಂದೆ ಜತಿನ್ ದಾಸ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ
ಮುಂಬೈ, ಅ. 16: ನಟಿ, ನಿರ್ದೇಶಕಿ ನಂದಿತಾ ದಾಸ್ ಅವರ ತಂದೆ ಹಾಗೂ ಖ್ಯಾತ ಕಲಾವಿದ ಜತಿನ್ ದಾಸ್ 14 ವರ್ಷಗಳ ಹಿಂದೆ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಜತಿನ್ ದಾಸ್ ಅವರ ಪೇಪರ್ ಮೇಕಿಂಗ್ ಕಂಪೆನಿಯ ಸಹ ಸ್ಥಾಪಕಿ ನಿಶಾ ಬೋರಾ ಆರೋಪಿಸಿದ್ದಾರೆ.
ಆದರೆ, ಈ ಆರೋಪವನ್ನು ಜತಿನ್ ದಾಸ್ ನಿರಾಕರಿಸಿದ್ದಾರೆ. ದೇಶಾದ್ಯಂತ ಬಿರುಗಾಳಿ ಎಬ್ಬಿಸುತ್ತಿರುವ ಮೀಟೂ ಚಳವಳಿಯ ಬೆಳೆಯುತ್ತಿರುವ ಪಟ್ಟಿಯಲ್ಲಿ ಇತ್ತೀಚೆಗಿನ ಸೇರ್ಪಡೆ ಜತಿನ್ ದಾಸ್. “ಆಗ ನನಗೆ 28 ವರ್ಷ. ಭೋಜನದ ಸಂದರ್ಭ ದಾಸ್ ಅವರು, ‘‘ನಿಮಗೆ ಸಮಯವಿದೆಯೇ ? ತನ್ನ ಕೆಲಸಕ್ಕೆ ಬೇಕಾದ ಸಲಕರಣೆಗಳನ್ನು ಸಂಯೋಜಿಸಲು ಕೆಲವು ದಿನಗಳ ಕಾಲ ನೆರವು ನೀಡಬಹುದೇ’ ಎಂದು ಪ್ರಶ್ನಿಸಿದ್ದರು. ನಾನು ಎರಡನೇ ದಿನ ಒಪ್ಪಿಗೆ ನೀಡಿದೆ. ಅವರು ವಿಲ್ಲೇಜ್ ಸ್ಟುಡಿಯೊದಲ್ಲಿ ನನಗೆ ಲೈಂಗಿಕ ಕಿರುಕುಳ ನೀಡಿದರು” ಎಂದು ನಿಶಾ ಬೋರಾ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
Next Story