varthabharthi

ಕ್ರೀಡೆ

‘2020ರ ಟ್ವೆಂಟಿ-20 ವಿಶ್ವಕಪ್ ತಯಾರಿ: ಕ್ರಿಸ್ ಗೇಲ್

ವಾರ್ತಾ ಭಾರತಿ : 17 Oct, 2018

ಶಾರ್ಜಾ, ಅ.16: ಇತ್ತೀಚೆಗೆ ಭಾರತ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ಪ್ರವಾಸದಿಂದ ದೂರ ಉಳಿದಿರುವ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಮುಂಬರುವ ಇಂಗ್ಲೆಂಡ್ ವಿರುದ್ದ ಸರಣಿಯಲ್ಲಿ ಲಭ್ಯವಿರುವುದಾಗಿ ದೃಢಪಡಿಸಿದ್ದಾರೆ.

‘‘ಇದೀಗ ತಾನು ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳಲ್ಲಿ ರನ್ ಗಳಿಸುವತ್ತ ಚಿತ್ತವಿರಿಸಿದ್ದೇನೆ. ಇದು 2020ರ ಟ್ವೆಂಟಿ-20 ವಿಶ್ವಕಪ್ ತಯಾರಿಯ ಒಂದು ಭಾಗವಾಗಿದೆ’’ ಎಂದು 39ರ ಹರೆಯದ ಗೇಲ್ ಹೇಳಿದ್ದಾರೆ.

‘‘ಇಂಗ್ಲೆಂಡ್ ವಿರುದ್ಧದ ಸರಣಿಗೆ ನಾನು ನಿಶ್ಚಿತವಾಗಿ ಲಭ್ಯವಿರುತ್ತೇನೆ. ಈ ಕ್ಷಣದಲ್ಲಿ ಇಂತಹ ಲೀಗ್‌ಗಳಲ್ಲಿ(ಫ್ರಾಂಚೈಸಿ ಕ್ರಿಕೆಟ್)ರನ್ ಗಳಿಸುವತ್ತ ಗಮನ ನೀಡುವೆ. ವಿಶ್ವಕಪ್‌ಗೆ ಸಜ್ಜಾಗಲು ಇದು ಅತ್ಯಂತ ಮುಖ್ಯವಾಗಿದೆ’’ ಎಂದು ಗೇಲ್ ತಿಳಿಸಿದ್ದಾರೆ.

ವೆಸ್ಟ್‌ಇಂಡೀಸ್ ತಂಡ ಇಂಗ್ಲೆಂಡ್ ವಿರುದ್ಧ 2019ರ ಫೆ.20 ರಿಂದ ಮಾ.2ರ ತನಕ ಐದು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)