ಪಿಎನ್ಬಿ ವಂಚನೆ ಪ್ರಕರಣ: ಚೋಕ್ಸಿ ಮತ್ತು ಇತರರ 218.46 ಕೋ.ರೂ.ಆಸ್ತಿ ಜಪ್ತಿ
ಹೊಸದಿಲ್ಲಿ,ಅ.17: ಜಾರಿ ನಿರ್ದೇಶನಾಲಯವು ಸುಮಾರು 13,000 ಕೋ.ರೂ.ಗಳ ಪಿಎನ್ಬಿ ಬ್ಯಾಂಕ್ ವಂಚನೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿ, ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಮತ್ತು ಇತರರಿಗೆ ಸೇರಿದ 218.46 ಕೋ.ರೂ. ವೌಲ್ಯದ ಆಸ್ತಿಗಳನ್ನು ಬುಧವಾರ ವಶಪಡಿಸಿಕೊಂಡಿದೆ.
ಈ ಆಸ್ತಿಗಳು ಚೋಕ್ಸಿ, ಮುಖ್ಯ ಆರೋಪಿ ನೀರವ್ ಮೋದಿಯ ನಿಕಟವರ್ತಿ ಅಮೆರಿಕದಲ್ಲಿರುವ ಮಿಹಿರ್ ಬನ್ಸಾಲಿ ಮತ್ತು ಎ.ಪಿ.ಜೆಮ್ಸ್ ಆ್ಯಂಡ್ ಜ್ಯುವೆಲ್ಲರಿ ಪಾರ್ಕ್ ಹೆಸರಿನ ಕಂಪನಿಗೆ ಸೇರಿದ್ದಾಗಿವೆ.
ಚೋಕ್ಸಿ ಕೆರಿಬಿಯನ್ ದ್ವೀಪರಾಷ್ಟ್ರ ಆ್ಯಂಟಿಗುವಾ ಮತ್ತು ಬರ್ಬುಡಾದಲ್ಲಿ ವಾಸವಿದ್ದಾನೆ ಎಂದು ವರದಿಯಾಗಿದ್ದು,ಬನ್ಸಾಲಿವಿರುದ್ಧ ಇತ್ತಿಚಿಗೆ ಇಂಟರ್ಪೋಟ್ ರೆಡ್ ಕಾರ್ನರ್ ನೋಟಿಸ್ನ್ನು ಹೊರಡಿಸಲಾಗಿದೆ.
Next Story