varthabharthi

ಕರಾವಳಿ

ಲೇವಾದೇವಿದಾರರ ಬೆದರಿಕೆ ಆರೋಪ; ಆತ್ಮಹತ್ಯೆಗೆ ಯತ್ನ

ವಾರ್ತಾ ಭಾರತಿ : 17 Oct, 2018

ಉಡುಪಿ, ಅ.17: ಲೇವಾದೇವಿದಾರರು 20 ಲಕ್ಷ ರೂ. ಸಾಲದ ಬಡ್ಡಿ ಮೊತ್ತವಾದ 16 ಲಕ್ಷ ರೂ.ಗಳನ್ನು ಪಾವತಿಸದಿದ್ದರೆ ಕುಟುಂಬವನ್ನು ನಾಶ ಮಾಡುವುದಾಗಿ ಒಡ್ಡಿದ ಬೆದರಿಕೆಯಿಂದ ಕಂಗೆಟ್ಟು ಸಹೋದರ ರಾಘವೇಂದ್ರ ಜೋಯಿಸ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಆತನ ಸಹೋದರ ಗುರುಪ್ರಸಾದ್ ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಹೈನುಗಾರಿಕೆ ಮತ್ತು ಗ್ರಾಮೀಣ ಸಾಪ್ಟ್‌ವೇರ್ ಅಭಿವೃಧ್ಧಿಗೆ ಸುಜಯ್ ಶೆಟ್ಟಿ ಎಂಬವರಿಂದ 2016ರಲ್ಲಿ 20 ಲಕ್ಷ ರೂ. ಸಾಲ ಪಡೆದಿದ್ದು, ಪ್ರತೀ ತಿಂಗಳು 1 ಲಕ್ಷ ರೂ. ಬಡ್ಡಿಯನ್ನು ಕಟ್ಟಲಾಗುತ್ತಿದೆ. ಈವರೆಗೆ ಒಟ್ಟು 30 ಲಕ್ಷ ರೂ. ಪಾವತಿಸಲಾಗಿದೆ. ಸೋಮವಾರ ಆರೋಪಿಗಳು ಬಾಕಿ ಬಡ್ಡಿ ಮೊತ್ತ ಪಾವತಿಸದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಇದರಿಂದ ಮನನೊಂದು ನಿದ್ರೆಮಾತ್ರೆ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೇರುತಿದ್ದಾರೆ ಎಂದು ಗುರುಪ್ರಸಾದ್ ಆರೋಪಿಸಿದರು. 

ಜೋಯಿಸ ಅವರ ತಾಯಿ ಶಾಂತಮ್ಮ, ಪತ್ನಿ ಪ್ರತಿಮಾ ರಾಘವೇಂದ್ರ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)