ಕಾಲೇಜ್ ನಲ್ಲಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ: 18 ಮಂದಿ ಮೃತ್ಯು
ಮಾಸ್ಕೋ, ಅ. 17: ಕ್ರೈಮಿಯದ ಕಾಲೇಜೊಂದರಲ್ಲಿ ಬುಧವಾರ ವಿದ್ಯಾರ್ಥಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 18 ಮಂದಿ ಮೃತಪಟ್ಟಿದ್ದಾರೆ ಹಾಗೂ ಡಝನ್ಗಟ್ಟಳೆ ಮಂದಿ ಗಾಯಗೊಂಡಿದ್ದಾರೆ.
ವಿದ್ಯಾರ್ಥಿಯು ಬಳಿಕ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡನು ಎಂದು ರಶ್ಯದ ಅಧಿಕಾರಿಗಳು ತಿಳಿಸಿದರು.
18 ವರ್ಷದ ವ್ಲಾದಿಸ್ಲಾವ್ ರೋಸ್ಲಕೊವ್ ಬುಧವಾರ ಮಧ್ಯಾಹ್ನ ಕೆರ್ಚ್ ನಗರದಲ್ಲಿರುವ ಕಾಲೇಜಿಗೆ ಬಂದೂಕಿನೊಂದಿಗೆ ಬಂದು ಗುಂಡು ಹಾರಿಸಲು ಆರಂಭಿಸಿದನು ಎಂದು ಅಧಿಕಾರಿಗಳು ತಿಳಿಸಿದರು.
ವಿದ್ಯಾರ್ಥಿಯ ಈ ವರ್ತನೆಗೆ ಕಾರಣ ಗೊತ್ತಾಗಿಲ್ಲ. 2014ರಲ್ಲಿ ಕ್ರೈಮಿಯವನ್ನು ರಶ್ಯ ತನ್ನ ಕೈವಶಪಡಿಸಿಕೊಂಡಿತ್ತು. ಇಂದಿನ ದಾಳಿಯ ಹೆಚ್ಚಿನ ಬಲಿಪಶುಗಳು ಹದಿಹರೆಯದ ವಿದ್ಯಾರ್ಥಿಗಳು. ಅವರಿಗೆ ಗುಂಡಿನ ಗಾಯಗಳಾಗಿವೆ.
Next Story