varthabharthi

ಕರ್ನಾಟಕ

ಮಂಡ್ಯ: ಉದ್ಯಮಿ ಆರ್.ಎಂ ಸುಂದರೇಶನ್ ನಿಧನ

ವಾರ್ತಾ ಭಾರತಿ : 17 Oct, 2018

ಮಂಡ್ಯ, ಅ.17: ಮಳವಳ್ಳಿಯ ನಾಗವಜ್ರ ಮೆಡಿಕಲ್ಸ್ ಸ್ಟೋರ್ ನ ಮಾಲಕ ಹಾಗೂ ಉದ್ಯಮಿ ಆರ್.ಎಂ.ಸುಂದರೇಶನ್(52) ಆನಾರೋಗ್ಯದಿಂದ ಕಳೆದ ಒಂದು ತಿಂಗಳಿನಿಂದ ಮೈಸೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ನಿಧನರಾದರು.

ಮಾಜಿ ಶಾಸಕ ದಿವಂಗತ ಬಿ.ಪಿ.ನಾಗರಾಜಮೂರ್ತಿಯವರ ಸಂಬಂಧಿಯಾದ ಸುಂದ್ರೇಶ್ ಅವರಿಗೆ ಪತ್ನಿ ಶಶಿ, ಒಬ್ಬ ಪುತ್ರಿ, ತಂದೆ ತಾಯಿ, ಇಬ್ಬರು ಸಹೋದರರು, ಸಹೋದರಿ ಇದ್ದಾರೆ .

ಮೃತರ ಅಂತ್ಯಕ್ರಿಯೆ ವೀರಶೈವ ವಿಧಿವಿಧಾನದಂತೆ ಆ.18ರಂದು ಬೆಳಗ್ಗೆ ಪಟ್ಟಣದ ಹೊರಹೊಲಯದ ರಾಗಿಬೊಮ್ಮನಹಳ್ಳಿಯ ಅವರ ಜಮೀನಿನಲ್ಲಿ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಸಂತಾಪ: ಮೃತರಿಗೆ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಬೆಸುಗೆ ಸಮಾನ ಮನಸ್ಕರ ಬಳಗ, ಡ್ರಗ್ಸ್ ಅಸೋಸಿಯೇಷನ್, ವಿಶ್ವ ಹಿಂದೂ ಪರಿಷತ್, ತಾಲೂಕು ವರದಿಗಾರರ ಒಕ್ಕೂಟ ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)