ಶಬರಿಮಲೆ ಬಗ್ಗೆ ಫೇಸ್ಬುಕ್ನಲ್ಲಿ ಪೋಸ್ಟ್: ಮಹಿಳೆಯನ್ನು ಕೆಲಸದಿಂದ ಅಮಾನತು ಮಾಡಿದ ಸಂಸ್ಥೆ
ಕೋಝಿಕ್ಕೋಡ್, ಅ.17: ಶಬರಿಮಲೆಗೆ ತೆರಳಲು ನಾನು ವ್ರತವನ್ನು ಆಚರಿಸುತ್ತಿರುವುದಾಗಿ ಮಹಿಳೆಯೊಬ್ಬರು ಫೇಸ್ಬುಕ್ನಲ್ಲಿ ಹೇಳಿಕೊಂಡಿರುವುದೇ ಆಕೆಯ ಕೆಲಸಕ್ಕೆ ಕುತ್ತು ತಂದ ಘಟನೆ ಕೇರಳದ ಕೋಝಿಕ್ಕೋಡ್ನಲ್ಲಿ ನಡೆದಿದೆ.
ತಾನು ಶಬರಿಮಲೆಗೆ ತೆರಳಲು ವ್ರತ ಆಚರಿಸುತ್ತಿರುವುದಾಗಿ ಮಹಿಳೆ ಫೇಸ್ಬುಕ್ನಲ್ಲಿ ತಿಳಿಸಿದ್ದರು. ಆದರೆ ಆಕೆ ತನ್ನ ಪೋಸ್ಟ್ನ ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ ತಮಾಷೆಗೆ ಗುರಿಯಾಗಿದ್ದರು. ಮಹಿಳೆ ಆಕೆಯ ಕೆಲವು ಸಹೋದ್ಯೋಗಿಗಳಿಂದಲೂ ಬೆದರಿಕೆಗೊಳಗಾಗಿದ್ದರು. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದ ಆಕೆಯ ಸಂಸ್ಥೆಯ ಆಡಳಿತವರ್ಗ ಮಹಿಳೆಯನ್ನು ತಾತ್ಕಾಲಿಕ ರಜೆಯಲ್ಲಿ ತೆರಳುವಂತೆ ಸೂಚಿಸಿದೆ.
ಮಹಿಳೆಯ ಫೇಸ್ಬುಕ್ ಪೋಸ್ಟ್ ಮತ್ತು ಇಂಥ ವಿವಾದದ ಸಮಯದಲ್ಲಿ ಆಕೆ ಶಬರಿಮಲೆಗೆ ತೆರಳುತ್ತಿರುವುದರಿಂದ ಸಂಸ್ಥೆಯು ತನ್ನ ಗ್ರಾಹಕರನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Next Story