varthabharthi

ರಾಷ್ಟ್ರೀಯ

ರಾಜಧಾನಿ ಎಕ್ಸ್‌ಪ್ರೆಸ್‌ಗೆ ಢಿಕ್ಕಿ ಹೊಡೆದ ಟ್ರಕ್: ಓರ್ವ ಮೃತ್ಯು

ವಾರ್ತಾ ಭಾರತಿ : 18 Oct, 2018

ಭೋಪಾಲ್, ಅ.18: ಟ್ರಕ್ ಹಾಗೂ ರಾಜಧಾನಿ ಎಕ್ಸ್‌ಪ್ರೆಸ್ ನಡುವೆ ಸಂಭವಿಸಿದ ಢಿಕ್ಕಿಯಲ್ಲಿ ಟ್ರಕ್ ಚಾಲಕ ಮೃತಪಟ್ಟರೆ, ದಿಲ್ಲಿಯತ್ತ ತೆರಳುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್‌ನ ಕನಿಷ್ಠ ಎರಡು ಬೋಗಿಗಳು ಹಳಿ ತಪ್ಪಿವೆ.

ಮಧ್ಯಪ್ರದೇಶದ ಥಾಂಡಿಯಾ ಕ್ರಾಸಿಂಗ್ ಬಳಿ ಟ್ರಕ್‌ವೊಂದು ತಡೆಬೇಲಿಯನ್ನು ಮುರಿದು ಮುನ್ನುಗ್ಗಿತ್ತು. ಘಟನೆಯಲ್ಲಿ ರೈಲ್ವೆ ಪ್ರಯಾಣಿಕರಿಗೆ ಗಾಯಗಳಾದ ವರದಿಯಾಗಿಲ್ಲ. ಗುರುವಾರ ಬೆಳಗ್ಗೆ 6:44ರ ಸುಮಾರಿಗೆ ಘಟನೆ ಸಂಭವಿಸಿದೆ. ಟ್ರಕ್ ರೈಲ್ವೆ ಕ್ರಾಸ್ಸಿಂಗ್‌ನ ಗೇಟ್‌ನ್ನು ಮುರಿದುಕೊಂಡು ಹೋಗಿ ಹಝ್ರತ್ ನಿಝಾಮುದ್ದೀನ್-ತ್ರಿವಂಡ್ರಮ್ ರಾಜಧಾನಿ ಎಕ್ಸ್‌ಪ್ರೆಸ್‌ನ ಬಿ7 ಹಾಗೂ ಬಿ8 ಕೋಚ್‌ಗೆ ಅಪ್ಪಳಿಸಿದೆ. ಎರಡು ಕೋಚ್‌ಗಳಲ್ಲಿದ್ದ ಪ್ರಯಾಣಿಕರನ್ನು ರೈಲಿನ ಇತರ ಕೋಚ್‌ಗಳಿಗೆ ಸ್ಥಳಾಂತರಿಸಲಾಗಿದೆ. ಹಳಿತಪ್ಪಿದ ಕೋಚ್‌ಗಳನ್ನು ಬೇರ್ಪಡಿಸಿದ ಬಳಿಕ ರಾಜಧಾನಿ ಎಕ್ಸ್‌ಪ್ರೆಸ್ ತನ್ನ ಯಾನ ಮುಂದುವರಿಸಿದೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿ ರಾಜೇಶ್ ದತ್ತ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)