‘ಅಮ್ಮಾ’ಗೆ ನಟ ದಿಲೀಪ್ ರಾಜೀನಾಮೆ ನೀಡಿದ್ದಾರೆ: ಮೋಹನ್ಲಾಲ್
ಕೊಚ್ಚಿ, ಅ.19: ನಟಿಗೆ ಕಿರುಕುಳ ನೀಡಿದ ಪ್ರಕರಣದ ಆರೋಪಿ ನಟ ದಿಲೀಪ್ ಸಿನೆಮಾ ತಾರೆಯರ ಸಂಘಟನೆ ‘ಅಮ್ಮಾ’ದಲ್ಲಿಲ್ಲ. ಅವರು ಈಗಾಗಲೇ ರಾಜೀನಾಮೆ ನೀಡಿದ್ದಾರೆ ಎಂದು ‘ಅಮ್ಮಾ’ ಅಧ್ಯಕ್ಷ ನಟ ಮೋಹನ್ ಲಾಲ್ ಹೇಳಿದರು.
‘ಅಮ್ಮಾ’ದಿಂದ ಹೊರಗೆ ಹೋದವರು ಮರಳಿ ಬರಬಹುದು. ಅದಕ್ಕೆ ಯಾವುದೇ ಅಡ್ಡಿಯಿಲ್ಲ. ಅದರೆ, ಸದಸ್ಯತ್ವ ಲಭಿಸಬೇಕಾದರೆ ಹೊಸ ಅರ್ಜಿ ಸಲ್ಲಿಸಬೇಕು. ಸಂಘಟನೆಗೆ ತಿಳಿದೇ ನಟ ಸಿದ್ದೀಕ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಮತ್ತು ನಟ ಜಗದೀಶ್ ಪತ್ರಿಕಾ ಹೇಳಿಕೆ ನೀಡಿದ್ದಾರೆ ಎಂದು ಮೋಹನ್ ಲಾಲ್ ತಿಳಿಸಿದರು.
Next Story