ಸಾರ್ವಜನಿಕರ ದೂರು ಸ್ವೀಕರಿಸುತ್ತಿದ್ದ ವೇಳೆ ಮಸಾಜ್ ಪಡೆಯುತ್ತಿದ್ದ ಎಎಸ್ಐ ಸಸ್ಪೆಂಡ್
ಪಾಟ್ನಾ,ಅ.20 : ಕೈಮೂರ್ ಜಿಲ್ಲೆಯ ಚೈನ್ಪುರ್ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರ ದೂರುಗಳನ್ನು ಆಲಿಸುವ ಸಂದರ್ಭ ಎಎಸ್ಐ ಒಬ್ಬರು ಮಸಾಜ್ ಪಡೆಯುತ್ತಿದ್ದ ವೀಡಿಯೋ ವೈರಲ್ ಆದ ಬೆನ್ನಲ್ಲೇ ಆ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಝಫರ್ ಇಮಾಮ್ ಅಮಾನತುಗೊಂಡ ಎಎಸ್ಐ ಆಗಿದ್ದಾರೆ. ಈ ವೀಡಿಯೋವನ್ನು ಯಾವಾಗ ರೆಕಾರ್ಡ್ ಮಾಡಲಾಗಿತ್ತೆಂದು ತಿಳಿದು ಬಂದಿಲ್ಲ. ವೀಡಿಯೋದಲ್ಲಿ ಝಫರ್ ಅವರು ಪೊಲಿಸ್ ಸಮವಸ್ತ್ರದಲ್ಲಿಯೇ ಇದ್ದು ತಮ್ಮ ಕಚೇರಿಯಲ್ಲಿ ಸಾರ್ವಜನಿಕರು ದೂರು ಸ್ವೀಕರಿಸುತ್ತಿದ್ದಾಗ ತಲೆ ಹಾಗೂ ಬೆನ್ನಿಗೆ ಮಸಾಜ್ ಪಡೆಯುತ್ತಿದ್ದರು.
ಕಳೆದೆರಡು ದಿನಗಳಿಂದ ಈ ವೀಡಿಯೋ ಹರಿದಾಡುತ್ತಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೈಮೂರ್ ಎಸ್ಪಿ ಅವರನ್ನು ಸೇವೆಯಿಂದ ಸಸ್ಪೆಂಡ್ ಮಾಡಿದ್ದಾರೆ.
Next Story