ಅ. 21: ಫ್ಯಾಶನ್ ಬಿಗ್ ಬಝಾರ್ ಫೆಸ್ಟಿವಲ್ ಕಲೆಕ್ಷನ್ ಅನಾವರಣ
ಮಂಗಳೂರು, ಅ.20: ನಗರದ ಫ್ಯಾಶನ್ ಬಿಗ್ ಬಝಾರ್ (ಎಫ್ಬಿಬಿ) ಫೆಸ್ಟಿವಲ್ ಕಲೆಕ್ಷನ್ನ್ನು ಚಲನಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ ನಗರದ ಸಿಟಿ ಸೆಂಟರ್ ಮಾಲ್ನಲ್ಲಿ ಅ.21ರಂದು ಸಂಜೆ 7 ಗಂಟೆಗೆ ಅನಾವರಣಗೊಳಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಕಲಾವಿದ ಮಕ್ಕಳಿಂದ ‘ಫ್ಯಾಶನ್ ಶೋ’ ಕಾರ್ಯಕ್ರಮವನ್ನು ಸಿಟಿ ಸೆಂಟರ್ ಮಾಲ್ನ ಎಫ್ಬಿಬಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಮಂಗಳೂರಿನ ಪ್ರಖ್ಯಾತ ರೂಪದರ್ಶಿಗಳಿಂದ ಫ್ಯಾಶನ್ ಬಿಗ್ ಬಝಾರ್ನ ಹಬ್ಬಗಳ ಬಟ್ಟೆ ಅನಾವರಣ ನಡೆಯಲಿದೆ ಎಂದು ಬಿಜ್ ಬಝಾರ್ ಪ್ರಕಟನೆ ತಿಳಿಸಿದೆ.
Next Story