ಬೆಂಗಳೂರು: ಹೊಟೇಲ್ಗೆ ಬಾಂಬ್ ಬೆದರಿಕೆ ಕರೆ
ಬೆಂಗಳೂರು, ಅ.20: ನಗರದ ವಿಠಲ್ ಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯು ಮ್ಯಾರಿಯೇಟ್ ಹೊಟೇಲ್ಗೆ ಬಾಂಬ್ ಇಡಲಾಗಿದೆ ಎಂದು ಕರೆ ಮಾಡಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು ಎಂದು ವರದಿಯಾಗಿದೆ.
ಹೊಟೇಲ್ನ ಆಪರೇಟರ್ ಸಂಖ್ಯೆಗೆ ಶನಿವಾರ ಬೆಳಗ್ಗೆ ಕರೆ ಮಾಡಿದ ಮಹಿಳೆಯೊಬ್ಬರು, ಕಾಶ್ಮೀರ ಮೂಲದ ಯುವಕನೊಬ್ಬ ಕಳೆದ ನಾಲ್ಕು ತಿಂಗಳಿಂದ ಹೊಟೇಲ್ಗೆ ಬಾಂಬ್ ಇಡಲು ಸಂಚುರೂಪಿಸಿದ್ದಾನೆ ಎಂದು ತಿಳಿಸಿರುವುದಾಗಿ ತಿಳಿದುಬಂದಿದೆ.
ಇದರಿಂದ ಆತಂಕಕ್ಕೊಳಗಾದ ಭದ್ರತಾ ಸಿಬ್ಬಂದಿ ಕೂಡಲೇ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹೊಟೇಲ್ನ ಭದ್ರತಾ ವಿಭಾಗದ ಮುಖ್ಯ ನಿರ್ವಾಹಕ ದೇವೇಂದ್ರ ಅವರು ಈ ಸಂಬಂಧ ನೀಡಿರುವ ದೂರು ದಾಖಲಿಸಿ ಕರೆ ಮಾಡಿದ ಮಹಿಳೆಗಾಗಿ ತೀವ್ರ ಶೋಧ ನಡೆಸಿದ್ದಾರೆ.
Next Story