‘ಮೀ ಟೂ’: ಕೊಚ್ಚಿ ಬಿಎನ್ನಾಲೆ ಸ್ಥಾಪಕ ರಿಯಾಝ್ ಕೊಮು ರಾಜೀನಾಮೆ
ಹೊಸದಿಲ್ಲಿ, ಅ. 20: ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಕೊಚ್ಚಿ ಮುಝಿರಿಸ್ ಬಿಎನ್ನಾಲೆ (ಕೆಎಂಬಿ)ಗೆ ಸಂಬಂಧಿಸಿದ ಎಲ್ಲ ಆಡಳಿತ ನಿರ್ವಹಣಾ ಸ್ಥಾನದಿಂದ ಕಲಾವಿದ ರಿಯಾಝ್ ಕೊಮು ಕೆಳಗಿಳಿದಿದ್ದಾರೆ. ಆರೋಪದ ಬಗ್ಗೆ ಸಮಿತಿಯೊಂದನ್ನು ರೂಪಿಸಲಾಗುವುದು ಎಂದು ಕೊಚ್ಚಿ ಬಿಎನ್ನಾಲೆ ಫೌಂಡೇಶನ್ನ ಹೇಳಿಕೆ ತಿಳಿಸಿದೆ. ‘‘ಆದಾಗ್ಯೂ, ಫೌಂಡೇಶನ್ ಔಪಚಾರಿಕ ದೂರು ಸ್ವೀಕರಿಸಿಲ್ಲ. ಯಾವುದೇ ಲೈಂಗಿಕ ಕಿರುಕುಳ ಅಥವಾ ದುರ್ವರ್ತನೆ ಬಗ್ಗೆ ಶೂನ್ಯ ಸಹಿಷ್ಣುತೆಗೆ ನಾವೆಲ್ಲರೂ ಬದ್ದರಾಗಿದ್ದೇವೆ. ಈ ವಿಷಯ ಪರಿಹಾರವಾಗುವ ವರೆಗೆ ಬಿಯೆನ್ನಾಲೆಗೆ ಸಂಬಂಧಿಸಿದ ಎಲ್ಲ ಆಡಳಿತ ನಿರ್ವಹಣಾ ಸ್ಥಾನದಿಂದ ರಿಯಾಜ್ ಕೊಮು ಕೆಳಗಿಳಿಯಲಿದ್ದಾರೆ’’ ಎಂದು ಹೇಳಿಕೆ ತಿಳಿಸಿದೆ.
Next Story