varthabharthi


ಈ ದಿನ

ನೇತಾಜಿಯಿಂದ ಹೊಸ ಸರಕಾರ ರಚನೆಯ ಘೋಷಣೆ

ವಾರ್ತಾ ಭಾರತಿ : 21 Oct, 2018

1943: ಮಹಾನ್ ಸ್ವಾತಂತ್ರ ಹೋರಾಟಗಾರ, ಕ್ರಾಂತಿಕಾರಿ ನೇತಾಜಿ ಸುಭಾಶ್ಚಂದ್ರ ಬೋಸ್‌ರು ಈ ದಿನ ಸ್ವತಂತ್ರ ಭಾರತದ ತಾತ್ಕಾಲಿಕ ಸರಕಾರ ರಚನೆಯ ಘೋಷಣೆಯನ್ನು ಹೊರಡಿಸಿದರು. ಭಾರತದಲ್ಲಿ ಪ್ರಬಲವಾಗಿ ಬೇರುಬಿಟ್ಟಿದ್ದ ಇಂಗ್ಲಿಷರನ್ನು ಹೊಡೆದೋಡಿಸಲು ಸಶಸ್ತ್ರ ಹೋರಾಟವೇ ನಡೆಯಬೇಕೆಂದು ಅವರು ಬಲವಾಗಿ ನಂಬಿದ್ದರು. ಈ ನಿಟ್ಟಿನಲ್ಲಿ ಇಂಡಿಯನ್ ನ್ಯಾಶನಲ್ ಆರ್ಮಿ ಎಂಬ ಸೈನ್ಯವನ್ನು ಕಟ್ಟಿದ್ದ ಅವರು, ಬರ್ಮಾ, ಫ್ರಾನ್ಸ್, ಇಟಲಿ, ಜರ್ಮನಿ ಮುಂತಾದ ದೇಶಗಳ ಸಹಾಯವನ್ನು ಯಾಚಿಸಿದ್ದರು.

1512: ಪ್ರೊಟೆಸ್ಟೆಂಟ್ ಪಂಗಡದ ಸ್ಥಾಪಕ ಮಾರ್ಟಿನ್ ಲೂಥರ್ ಅವರು, ವಿಟೆನ್‌ಬರ್ಗ್ ವಿಶ್ವವಿದ್ಯಾನಿಲಯದ ದೇವತಾಶಾಸ್ತ್ರ ಬೋಧನಾ ವಿಭಾಗಕ್ಕೆ ನೇಮಕಗೊಂಡರು.

1914: ಜರ್ಮನಿಯ ಸೋಲಿನೊಂದಿಗೆ ವಾರ್ಸಾ ಯುದ್ಧ ಕೊನೆಗೊಂಡಿತು.

1945: ಫ್ರಾನ್ಸ್‌ನಲ್ಲಿ ಪ್ರಥಮ ಬಾರಿಗೆ ಮಹಿಳೆಯರಿಗೆ ಮತದಾನದ ಹಕ್ಕು ನೀಡಲಾಯಿತು.

1950: ಬೆಲ್ಝಿಯಂನಲ್ಲಿ ಮರಣದಂಡನೆಯನ್ನು ನಿಷೇಧಿಸಲಾಯಿತು.

1966: ಇಂಗ್ಲೆಂಡ್‌ನ ಸೌಥ್ ವೇಲ್ಸ್‌ನಲ್ಲಿ ಕಲ್ಲಿದ್ದಲಿನ ತ್ಯಾಜ್ಯದ ರಾಶಿ ಕುಸಿದು ಶಾಲೆಯೊಂದಕ್ಕೆ ಆವರಿಸಿದ ಪರಿಣಾಮ 116 ಮಕ್ಕಳು ಮತ್ತು 28 ಜನ ವಯಸ್ಕರು ಮರಣಹೊಂದಿದರು.

1971: ವಿಶ್ವವಿಖ್ಯಾತ ಕವಿ ಚಿಲಿದೇಶದ ಪ್ಯಾಬ್ಲೊ ನೆರೊಡಾರಿಗೆ ಸಾಹಿತ್ಯದ ನೊಬೆಲ್ ಪ್ರಶಸ್ತಿ ಘೋಷಿಸಲಾಯಿತು.

1981: ಕನ್ನಡದ ಖ್ಯಾತ ಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ. ಬೇಂದ್ರೆ ಇಂದು ನಿಧನರಾದರು.

2012: ಬಾಲಿವುಡ್‌ನ ಖ್ಯಾತ ನಿರ್ದೇಶಕ, ನಿರ್ಮಾಪಕ ಯಶ್ ಚೋಪ್ರಾ ನಿಧನ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)