ಮುಂಬೈ ಕೌನ್ಸಿಲ್ ಜನರಲ್ ಟ್ವೆಕಾಂಡೋ ಚಾಂಪಿಯನ್ಶಿಪ್: ಗೂಡಿನಬಳಿ ಶಾರೂಕ್ ಗೆ 2 ಚಿನ್ನ
ಮುಹಮ್ಮದ್ ಶಾರೂಕ್
ಬಂಟ್ವಾಳ, ಅ. 21: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಮುಂಬೈ ಕೌನ್ಸಿಲ್ ಜನರಲ್ ಕಪ್ ರಾಷ್ಟ್ರ ಮಟ್ಟದ 80 ಕೆಜಿ ಒಳಗಿನ ಓಪನ್ ಟ್ವೆಕಾಂಡೋ ಚಾಂಪಿಯನ್ಶಿಪ್ನಲ್ಲಿ ಬಂಟ್ವಾಳ ತಾಲೂಕಿನ ಗೂಡಿನಬಳಿ ನಿವಾಸಿ ಬಿ. ಮುಹಮ್ಮದ್ ಶಾರೂಕ್ ಅವರು ಫೈಟಿಂಗ್ ಹಾಗೂ ಪುಂಸೆ ವಿಭಾಗದಲ್ಲಿ 2 ಚಿನ್ನದ ಪದಕ ಗೆದ್ದು ಸಾಧನೆ ಮೆರೆದಿದ್ದಾರೆ.
ಇವರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಮಟ್ಟದ 76 ಕೆಜಿ ಒಳಗಿನ ಓಪನ್ ಟ್ವೆಕಾಂಡೋ ಚಾಂಪಿಯನ್ಶಿಪ್ ‘ಜೋಸ್ವಾ ಕಪ್’ನ ಫೈಟಿಂಗ್ ವಿಭಾಗದಲ್ಲಿ ಚಿನ್ನ ಹಾಗೂ ಪುಂಸೆ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿರುವುದನ್ನು ಈ ಸಂದರ್ಭ ಸ್ಮರಿಸಬಹುದು.
ಗೂಡಿನಬಳಿ ನಿವಾಸಿ ಇಸಾಕ್-ಮಮ್ತಾಝ್ ದಂಪತಿಯ ಪುತ್ರನಾಗಿರುವ ಶಾರೂಕ್ ಪ್ರಸ್ತುತ ಮಂಗಳೂರು-ಇನೋಳಿ ಬ್ಯಾರೀಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಅಂತಿಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ.
ಅವರಿಗೆ ಇಸಾಕ್ ನಂದಾವರ ಹಾಗೂ ಇಬ್ರಾಹಿಂ ನಂದಾವರ ತರಬೇತಿ ನೀಡಿದ್ದು, ಬಿ.ಸಿ.ರೋಡು-ಕೈಕಂಬದ ಫ್ಯಾನ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.