ಕಲ್ಲಿದ್ದಲು ಕೊರತೆ: ಆರ್ಟಿಪಿಎಸ್ನ 6 ವಿದ್ಯುತ್ ಘಟಕಗಳು ಸ್ಥಗಿತ
ಸಾಂದರ್ಭಿಕ ಚಿತ್ರ
ರಾಯಚೂರು, ಅ.21: ಕಲ್ಲಿದಲ್ಲಿನ ಕೊರತೆಯಿಂದಾಗಿ ಆರ್ಟಿಪಿಎಸ್ನ 6 ಘಟಕಗಳ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ರಾಯಚೂರಿನ ಶಕ್ತಿನಗರದಲ್ಲಿನ ಆರ್ಟಿಪಿಎಸ್ನ 2,3,4,,6,7,8ನೆ ವಿದ್ಯುತ್ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ.
ಒಟ್ಟು 1720 ಮೆಗಾವ್ಯಾಟ್ ಸಾಮರ್ಥ್ಯದ ಕೇಂದ್ರದಿಂದ 316 ಮೆಗಾವ್ಯಾಟ್ ಉತ್ಪಾದಿಸಲಾಗುತ್ತಿದ್ದು, 1404 ಮೆಗಾವ್ಯಾಟ್ ವಿದ್ಯುತ್ ಖೋತಾವಾಗಿದೆ. 1 ರಿಂದ 7ನೆ ಘಟಕಗಳು ತಲಾ 200 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದೆ. 3ನೆ ಘಟಕವನ್ನು ವಾರ್ಷಿಕ ನಿರ್ವಹಣೆ ಕೈಗೊಳ್ಳಲಾಗಿದೆ.
Next Story