ಸೌದಿ ವಿವರಣೆಯನ್ನು ನಂಬುವುದಿಲ್ಲ: ಬ್ರಿಟನ್ ಸಚಿವ
ಲಂಡನ್, ಅ. 21: ಇಸ್ತಾಂಬುಲ್ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ನಡೆದ ಪತ್ರಕರ್ತ ಜಮಾಲ್ ಖಶೋಗಿಯ ಸಾವಿನ ಬಗ್ಗೆ ಸೌದಿ ಅರೇಬಿಯ ನೀಡಿರುವ ವಿವರಣೆ ವಿಶ್ವಾಸಾರ್ಹವಲ್ಲ ಎಂದು ಬ್ರಿಟನ್ನ ಬ್ರೆಕ್ಸಿಟ್ ಸಚಿವ ಡೋಮಿನಿಕ್ ರಾಬ್ ರವಿವಾರ ಹೇಳಿದ್ದಾರೆ.
ಅವರು ಬಿಬಿಸಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದರು.
ಸೌದಿ ಅರೇಬಿಯದ ವಿವರಣೆಯನ್ನು ನೀವು ನಂಬುವಿರೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ, ‘‘ಇಲ್ಲ, ಅದು ವಿಶ್ವಾಸಾರ್ಹ ಎಂದು ನನಗನಿಸುವುದಿಲ್ಲ. ಈ ಬಗ್ಗೆ ಟರ್ಕಿ ನಡೆಸುತ್ತಿರುವ ತನಿಖೆಯನ್ನು ನಾವು ಬೆಂಬಲಿಸುತ್ತೇವೆ. ಈ ಸಾವಿಗೆ ಕಾರಣವಾದ ಜನರನ್ನು ಉತ್ತರದಾಯಿಗಳನ್ನಾಗಿಸುವುದನ್ನು ನೋಡಲು ಬ್ರಿಟನ್ ಬಯಸುತ್ತದೆ’’ ಎಂದರು.
Next Story