ಯೂತ್ ಒಲಿಂಪಿಯನ್ಗಳನ್ನು ಭೇಟಿಯಾದ ಪ್ರಧಾನಿ
ಹೊಸದಿಲ್ಲಿ, ಅ.21: ಪ್ರಧಾನಮಂತ್ರಿ ನರೇಂದ್ರ ಮೋದಿ ರವಿವಾರ ಯೂತ್ ಒಲಿಂಪಿಕ್ ಗೇಮ್ಸ್ಸ್ನಲ್ಲಿ ಪದಕ ವಿಜೇತ ಅಥ್ಲೀಟ್ಗಳನ್ನು ಭೇಟಿಯಾಗಿ ಸಂವಾದ ನಡೆಸಿದರು.
ಒಲಿಂಪಿಕ್ ಗೇಮ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಯುವ ಅಥ್ಲೀಟ್ಗಳು 13 ಪದಕಗಳೊಂದಿಗೆ ತವರಿಗೆ ವಾಪಸಾಗಿದ್ದಾರೆ.
ಚಿನ್ನದ ಪದಕ ವಿಜೇತ ಶೂಟರ್ ಮನು ಭಾಕರ್, ಬೆಳ್ಳಿ ಪದಕ ವಿಜೇತ ಪುರುಷ ಹಾಗೂ ಮಹಿಳಾ ಹಾಕಿ ಆಟಗಾರರೊಂದಿಗೆ ಫೋಟೊ ತೆಗೆದು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ‘‘ನಮ್ಮ ಯುವ ಶಕ್ತಿಯ ಬಗ್ಗೆ ಹೆಮ್ಮೆಯಾಗುತ್ತಿದೆ. ಬ್ಯುನಸ್ಐರಿಸ್ನಲ್ಲಿ ನಡೆದ ಯೂತ್ ಒಲಿಂಪಿಕ್ ಗೇಮ್ಸ್ನಲ್ಲಿ ಪದಕ ಜಯಿಸಿರುವ ನಮ್ಮ ಯುವ ಅಥ್ಲೀಟ್ಗಳೊಂದಿಗೆ ಸಂವಾದ ನಡೆಸಿದ್ದೇನೆ’’ ಎಂದು ಟ್ವೀಟ್ ಮಾಡಿದ್ದಾರೆ.
Next Story