ಡಾ.ರವಿ ಅಪ್ಪಾಜಿಯವರಿಗೆ ರೋಟರಿಯ ಪ್ರತಿಷ್ಟಿತ ಪ್ರಶಸ್ತಿಯ ಗೌರವ
ಮಡಿಕೇರಿ, ಅ.22: ಮಡಿಕೇರಿಯ ಹಿರಿಯ ತಜ್ಞ ವೈದ್ಯ ಡಾ. ರವಿ ಅಪ್ಪಾಜಿ ಅವರಿಗೆ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯಿಂದ ಪ್ರತಿಷ್ಟಿತ ಸರ್ವಿಸ್ ಎಬೋವ್ ಸೆಲ್ಫ್ ಎಂಬ ಗೌರವ ಪ್ರಶಸ್ತಿ ದೊರಕಿದೆ.
ರೋಟರಿ ಸಂಸ್ಥೆಯಲ್ಲಿ ಅತ್ಯನ್ನುತ ವೈಯಕ್ತಿಕ ಪ್ರಶಸ್ತಿಯಾಗಿರುವ ಸರ್ವಿಸ್ ಎಬೋವ್ ಸೆಲ್ಫ್ ಅನ್ನು ಚಿಕಾಗೋದಲ್ಲಿ ಇತ್ತೀಚಿಗೆ ನಡೆದ ಅಂತರಾಷ್ಟ್ರೀಯ ರೋಟರಿ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಿದಂತೆ ಡಾ.ರವಿ ಅಪ್ಪಾಜಿಯವರಿಗೆ ನೀಡಲಾಗಿದೆ. ಈ ಪ್ರಶಸ್ತಿಯನ್ನು ಚೆನ್ನೈನಲ್ಲಿ ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯ ಮಾಜಿ ಗವರ್ನರ್ ಪಾಂಡುರಂಗ ಶೆಟ್ಟಿ ಡಾ.ರವಿ ಅಪ್ಪಾಜಿಯವರಿಗೆ ಪ್ರಧಾನ ಮಾಡಿದರು.
ರೋಟರಿ ಸಂಸ್ಥೆಯಲ್ಲಿ ಡಾ.ರವಿ ಅಪ್ಪಾಜಿಯವರ ಸಕ್ರಿಯ ಸೇವೆ, ರೋಟರಿ ಸಂಸ್ಥೆಗಳಿಗೆ ಸೂಕ್ತ ಮಾರ್ಗದರ್ಶನವನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
Next Story