varthabharthi


ಈ ದಿನ

ಮುಸಲೋನಿ ನಿಯಂತ್ರಣಕ್ಕೆ ಇಟಲಿ

ವಾರ್ತಾ ಭಾರತಿ : 28 Oct, 2018

1776: ಖ್ಯಾತ ಲೇಖಕ, ಕವಿ ಜೋನಾಥನ್ ಸ್ವಿಫ್ಟ್ ಅವರ ಪ್ರಮುಖ ಕೃತಿ ‘ಗಲಿವರ್ಸ್‌ ಟ್ರಾವೆಲ್ಸ್’ ಲಂಡನ್‌ನ ಬೆಂಜಮಿನ್ ಮೊಟೆ ಪ್ರಕಾಶನದಿಂದ ಈ ದಿನ ಪ್ರಕಟವಾಯಿತು.
1922: ಬೆನಿಟೊ ಮುಸಲೋನಿ ಇಟಲಿಯನ್ನು ಸಂಪೂರ್ಣ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡನು.
1943: ಅಮೆರಿಕದ ವಿಮಾನವು ಜರ್ಮನ್ ಸಬ್‌ಮರೀನ್ ಯು-220 ಅನ್ನು ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿಸಿತು.
1954: ಅಮೆರಿಕದ ಖ್ಯಾತ ಲೇಖಕ ಅರ್ನೆಸ್ಟ್ ಹೆಮಿಂಗ್ವೆ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿಗೆ ಭಾಜನರಾದರು.
1971: ಪ್ರಾಸ್ಪೆರೊ ಉಪಗ್ರಹದ ಮೂಲಕ ಬ್ರಿಟನ್ ಕಕ್ಷೆಯಲ್ಲಿ ಉಪಗ್ರಹ ಹೊಂದಿದ ಆರು ಪ್ರಮುಖ ರಾಷ್ಟ್ರಗಳಲ್ಲಿ ಒಂದಾಯಿತು.
2009: ಪಾಕಿಸ್ತಾನದ ಪೇಶಾವರದಲ್ಲಿ ಬಾಂಬ್ ದಾಳಿಗೆ 117 ಜನ ಮೃತಪಟ್ಟರು. 213 ಜನ ಗಾಯಗೊಂಡರು.

2012: ಭಾರತ ಮೂಲದ ದಂತವೈದ್ಯೆ ಸವಿತಾ ಹಾಲಪ್ಪನವರ್ ಈ ದಿನ ಗರ್ಭಪಾತದ ನಂಜಿನ ಕಾರಣದಿಂದ ಐರ್ಲೆಂಡ್‌ನ ಆಸ್ಪತ್ರೆಯಲ್ಲಿ ನಿಧನರಾದರು. ಸವಿತಾ ಹಾಲಪ್ಪನವರ್‌ರ ಜೀವಕ್ಕೆ ಅಪಾಯ ಇದ್ದುದರಿಂದ ಗರ್ಭಪಾತ ಅನಿವಾರ್ಯವಾಗಿತ್ತು. ಆದರೆ ವೈದ್ಯರು ಅಲ್ಲಿನ ಗರ್ಭಪಾತ ವಿರೋಧಿ ಕಾನೂನಿನ ಕಾರಣದಿಂದ ಗರ್ಭಪಾತ ನಿರಾಕರಿಸಿದ್ದರಿಂದ ನಂಜಿನಿಂದ ಸವಿತಾ ಸಾವನ್ನಪ್ಪಿದರು. ಐರ್ಲೆಂಡ್‌ನ ಈ ಕಾಯ್ದೆಯ ವಿರುದ್ಧ ವಿಶ್ವದೆಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಕೊನೆಗೆ ಈ ಕಾಯ್ದೆಯನ್ನು ಸರಕಾರ ಬದಲಿಸಬೇಕಾಯಿತು. 2015: ಎಚ್‌ಐವಿ ಜೊತೆಗೆ ಟಿಬಿಯನ್ನೂ ಅತ್ಯಂತ ಮಾರಣಾಂತಿಕ ಸಾಂಕ್ರಾಮಿಕ ರೋಗವೆಂದು ವಿಶ್ವ ಆರೋಗ್ಯ ಸಂಸ್ಥೆ ಈ ದಿನ ಶ್ರೇಯಾಂಕ ನೀಡಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)