varthabharthi

ಇ-ಜಗತ್ತು

ಫೇಸ್ ಬುಕ್ ಬಳಕೆದಾರರಿಗೂ ಸಿಗಲಿದೆ ವಾಟ್ಸ್ಯಾಪ್ ನಲ್ಲಿರುವ ಈ ಫೀಚರ್

ವಾರ್ತಾ ಭಾರತಿ : 8 Nov, 2018

ವಾಟ್ಸ್ಯಾಪ್ ನಲ್ಲಿರುವ ‘ಡಿಲಿಟ್ ಫಾರ್ ಎವರಿವನ್’ನಂತಹ ಫೀಚರನ್ನು ಮುಂದಿನ ದಿನಗಳಲ್ಲಿ ಫೇಸ್ಬುಕ್ ಕೂಡ ಹೊಂದಲಿದೆ. ಬಳಕೆದಾರರು ಮತ್ತೊಬ್ಬರಿಗೆ ಕಳುಹಿಸಿದ ಸಂದೇಶವನ್ನು 10 ನಿಮಿಷಗಳೊಳಗಾಗಿ ಡಿಲಿಟ್ ಮಾಡುವ ಫೀಚರನ್ನು ಹೊರತರಲು ಫೇಸ್ಬುಕ್ ನಿರ್ಧರಿಸಿದೆ ಎಂದು ವರದಿಯಾಗಿದೆ.

ಮೆಸೆಂಜರ್ 191.0 ವರ್ಷನ್ ನ ರಿಲೀಸ್ ನೋಟ್ಸ್ ನಲ್ಲಿರುವ ‘ಕಮಿಂಗ್ ಸೂನ್’ ಲಿಸ್ಟ್ ನಲ್ಲಿ ಈ ಫೀಚರ್ ಬಗ್ಗೆ ಉಲ್ಲೇಖವಿದೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.

“ಕಮಿಂಗ್ ಸೂನ್: ನೀವು ಕಳುಹಿಸಿದ ಸಂದೇಶವನ್ನು ಅಳಿಸಿ ಹಾಕಬಹುದು. ನೀವು ಕಣ್ತಪ್ಪಿನಿಂದ ತಪ್ಪು ಫೋಟೊ, ತಪ್ಪು ಮಾಹಿತಿ ಅಥವಾ ಸಂದೇಶಗಳನ್ನು ಕಳುಹಿಸಿದರೆ ನೀವು ಸಂದೇಶ ಕಳುಹಿಸಿದ 10 ನಿಮಿಷಗಳ ನಂತರ ಅವುಗಳನ್ನು ಅಳಿಸಿ ಹಾಕಬಹುದು” ಎಂದು ಡಿಸ್ಕ್ರಿಪ್ಶನ್ ನಲ್ಲಿ ಬರೆಯಲಾಗಿದೆ ಎಂದು ಟ್ವಿಟರ್ ಬಳಕೆದಾರರು ವಿವರಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)