ದುಬೈ: ಮಾಜಿ ಪ್ರಧಾನಿ ದೇವೇಗೌಡರಿಗೆ ಬಿಸಿಸಿಐ ಯುಎಇ ಘಟಕದಿಂದ ಸನ್ಮಾನ
ದುಬೈ, ನ. 13: ದುಬೈಗೆ ಭೇಟಿ ನೀಡಿದ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಯುಎಇ ಘಟಕ ವತಿಯಿಂದ ಸನ್ಮಾನಿಸಲಾಯಿತು.
ಬಿಸಿಸಿಐ ಯುಎಇ ಘಟಕಾಧ್ಯಕ್ಷ ಎಸ್.ಎಂ. ಬಶೀರ್, ಉಪಾಧ್ಯಕ್ಷರಾದ ಅಬ್ದಲ್ಲಾ ಮಡುಮೂಲೆ, ಎಂ.ಎಸ್. ಹಿದಾಯತ್ ಅಡ್ಡೂರ್, ಪ್ರಧಾನ ಕಾರ್ಯದರ್ಶಿ ತನ್ವೀರ್ ಅಹ್ಮದ್, ಕಾರ್ಯದರ್ಶಿ ಅಲ್ತಾಫ್ ಡೈಮಂಡ್ ಅವರು ದೇವೇಗೌಡರನ್ನು ಸನ್ಮಾನಿಸಿ, ಗೌರವಿಸಿದರು.
ಈ ಸಂದರ್ಭ ಬಿಸಿಸಿಐನ ಹಂಝ, ನವೀದ್ ಮಾಗುಂಡಿ, ಅಲ್ತಾಫ್ ಮಡಿಕೇರಿ, ಜೆಡಿಎಸ್ ಮುಖಂಡರಾದ ದಾನಿಶ್ ಅಲಿ, ಝಫ್ರುಲ್ಲಾ ಖಾನ್, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಹಾಗು ಇತರರು ಉಪಸ್ಥಿತರಿದ್ದರು.
Next Story