ಮಹಾರಾಷ್ಟ್ರ ವಿಧಾನಸಭೆ,ಪಕ್ಷಕ್ಕೆ ಬಿಜೆಪಿ ಶಾಸಕ ಗೋಟೆ ರಾಜೀನಾಮೆ
ಮುಂಬೈ,ನ.13: ಪಕ್ಷಕ್ಕೆ ಕ್ರಿಮಿನಲ್ಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಧುಲೆ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಗೋಟೆ ಅವರು ವಿಧಾನಸಭಾ ಸದಸ್ಯತ್ವಕ್ಕೆ ಮತ್ತು ಪಕ್ಷಕ್ಕೆ ತನ್ನ ರಾಜೀನಾಮೆಯನ್ನು ಪ್ರಕಟಿಸಿದ್ದಾರೆ.
ತನ್ನ ರಾಜೀನಾಮೆಯನ್ನು ಚಳಿಗಾಲದ ಅಧಿವೇಶನದ ಮೊದಲ ದಿನವಾದ ನ.19ರಂದು ವಿಧಾನಸಭಾ ಸ್ಪೀಕರ್ಗೆ ಸಲ್ಲಿಸುವುದಾಗಿ ಮತ್ತು ಅಂದೇ ಪಕ್ಷಕ್ಕೂ ರಾಜೀನಾಮೆ ನೀಡುವುದಾಗಿ ಗೋಟೆ ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಅವರು ಬಿಜೆಪಿಗೆ ಎನ್ಸಿಪಿಯ ಕೆಲವು ನಾಯಕರ ಸೇರ್ಪಡೆಯನ್ನು ವಿರೋಧಿಸುತ್ತಿದ್ದಾರೆ. 2009ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದ ಗೋಟೆ,2014ರ ರಾಜ್ಯ ಚುನಾವಣೆಗೆ ಮುನ್ನ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಈ ಹಿಂದೆ ಅಬ್ದುಲ್ ಕರೀಂ ತೆಲಗಿಯ ಖೋಟಾ ಸ್ಟಾಂಪ್ ಪೇಪರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದ ಅವರು ಸದ್ಯ ಜಾಮೀನಿನಲ್ಲಿ ಹೊರಗಿದ್ದಾರೆ.
ಕಳೆದ ತಿಂಗಳು ಬಿಜೆಪಿಯ ಇನ್ನೋರ್ವ ಶಾಸಕ ಆಶಿಷ್ ದೇಶಮುಖ್ ಅವರು ವಿಧಾನಸಭಾ ಸದಸ್ಯತ್ವಕ್ಕೆ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.