ಪ್ರೊ ಕಬಡ್ಡಿ: ಗೆಲುವಿನ ನಗೆಬೀರಿದ ಟೈಟಾನ್ಸ್
ಮುಂಬೈ, ನ.13: ಪ್ರೊ ಕಬಡ್ಡಿ ಲೀಗ್ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡ ಪುಣೇರಿ ಪಲ್ಟನ್ಸ್ ತಂಡವನ್ನು 28-25 ಅಂಕಗಳಿಂದ ರೋಚಕವಾಗಿ ಮಣಿಸಿದೆ.
ತೆಲುಗು ಪರ ರೈಡರ್ಗಳಾದ ರಾಹುಲ್ ಚೌಧರಿ(8 ಅಂಕ), ನೀಲೇಶ್ ಸಾಳುಂಕೆ(6) ಹಾಗೂ ಕುಶ್ನಾ ಮದಾನೆ(4 ಅಂಕ)ಸಂಘಟಿತ ಪ್ರದರ್ಶನ ನೀಡಿ ಈ ಋತುವಿನಲ್ಲಿ 5ನೇ ಗೆಲುವು ತಂದರು. ಮತ್ತೊಂದೆಡೆ ಪುಣೇರಿ ತಂಡ 14 ಪಂದ್ಯಗಳಲ್ಲಿ 7ನೇ ಸೋಲು ಕಂಡಿದೆ.
ಪುಣೆ ಪರ ಸಂದೀಪ್ ನರ್ವಾಲ್ ಹಾಗೂ ಆಕಾಶ್ ಜಾಧವ್ ಕ್ರಮವಾಗಿ 7 ಹಾಗೂ 5 ಅಂಕ ಗಳಿಸಿದರು.
Next Story