varthabharthi


ಓ ಮೆಣಸೇ

ಓ ಮೆಣಸೇ....

ವಾರ್ತಾ ಭಾರತಿ : 19 Nov, 2018
ಪಿ.ಎ.ರೈ

ಯಡಿಯೂರಪ್ಪರಿಗೆ ಕಣ್ಣು ಮುಚ್ಚಿದರೆ ಸಾಕು ವಿಧಾನ ಸೌಧದ ಮೂರನೇ ಮಹಡಿಯೇ ಕಾಣುತ್ತದೆ -ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಅದಕ್ಕಾಗಿಯೇ ಇರಬೇಕು, ಬಿಜೆಪಿಯಲ್ಲಿ ಅವರು ಕಣ್ಣು ಮುಚ್ಚುವುದಕ್ಕೆ ಹಲವರು ಕಾಯುತ್ತಿರುತ್ತಾರೆ.

---------------------
  ನಾನು ರಾಜಕಾರಣಿ ಆಗಿರುವ ಜೊತೆಗೆ ಪತ್ನಿಗೆ ಗಂಡನೂ ಹೌದು, ಮಗಳಿಗೆ ಅಪ್ಪನೂ ಹೌದು - ಪ್ರತಾಪ್‌ಸಿಂಹ, ಸಂಸದ
ತಾವು ಸಂಪಾದಿಸಿರುವ ಸಂಪತ್ತಿಗೆ ಸಮರ್ಥನೆಯೇ?
---------------------
ರಾಹುಲ್ ಗಾಂಧಿ ಜನರಿಗೆ ಒಂಥರ ಮನರಂಜನೆ ಇದ್ದಂತೆ - ರಮಣಸಿಂಗ್, ಛತ್ತೀಸ್‌ಗಡ ಮುಖ್ಯಮಂತ್ರಿ
ಮೋದಿಯೆಂದರೆ ಹಾರರ್ ಸಿನೆಮಾ.

---------------------
  ಛತ್ತೀಸ್‌ಗಡ ಈಗ ಮಾವೋ ಮುಕ್ತ ರಾಜ್ಯವಾಗುತ್ತಿದೆ - ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ದೇಶ ಮಾತ್ರ ಸಂಘಪರಿವಾರ ಉಗ್ರರ ಆಡುಂಬೊಲವಾಗುತ್ತಿದೆ.

---------------------
ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಟಿಪ್ಪು ಜಯಂತಿ ಆಚರಿಸಿ ಹಾಳಾದರು. ಈಗ ಬಿಜೆಪಿಗೆ ಬಂದ ಮೇಲೆ ಉದ್ಧಾರವಾಗಿದ್ದಾರೆ - ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
  ಅವರು ಉದ್ಧಾರವಾಗಲು ನೀವು ಎಲ್ಲಿ ಬಿಟ್ಟಿದ್ದೀರಿ?
---------------------
  ಶ್ರೀರಾಮನಿಗೆ ಬೇಕು ಅನಿಸಿದಾಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲಾಗುವುದು - ದಿನೇಶ್‌ಶರ್ಮಾ, ಉ.ಪ್ರ.ಮುಖ್ಯಮಂತ್ರಿ
ಶ್ರೀರಾಮನಿಗೆ ಬೇಕು ಅನ್ನಿಸಬೇಕಾದರೆ ಚುನಾವಣೆ ಹತ್ತಿರ ಬರಬೇಕು.

---------------------
  ಮೋದಿ ವಿರುದ್ಧ ಒಟ್ಟಾಗಿ ನಿಂತಿರುವ ಹತ್ತು ಮಂದಿ ನಾಯಕರಿಗಿಂತಲೂ ಅವರು ಬಲಿಷ್ಟ
-ರಜನಿಕಾಂತ್, ನಟ
 ವಿಶ್ವದಲ್ಲಿ ರಜನೀಕಾಂತ್ ಬಳಿಕ ನರೇಂದ್ರ ಮೋದಿಯೇ ಬಲಿಷ್ಟ ಎನ್ನುವುದು ಹೊಸ ಜೋಕು.

---------------------
  ಮಾಯಾವತಿ ಪ್ರಧಾನ ಮಂತ್ರಿಯಾಗುವುದಾದರೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೂ ತಪ್ಪಲ್ಲ -ಎನ್.ಮಹೇಶ್ ಮಾಜಿ ಸಚಿವ
ಪ್ರಧಾನಮಂತ್ರಿಯಾಗುವುದಾದರೆ ನಾವೇ ರಾಮಮಂದಿರ ಕಟ್ಟಿಸಿಕೊಡುತ್ತೇವೆ ಎಂದು ಹೇಳಲಿಲ್ಲವಲ್ಲ.

---------------------
ಖಾಸಗಿ ಬ್ಯಾಂಕುಗಳಿಂದ ರೈತರ ಶೋಷಣೆ ಸಹಿಸುವುದಿಲ್ಲ - ಕುಮಾರಸ್ವಾಮಿ, ಮುಖ್ಯಮಂತ್ರಿ
  ಮತ್ತಾವ ಬ್ಯಾಂಕುಗಳಿಂದ ಶೋಷಣೆಯನ್ನು ಸಹಿಸುತ್ತೀರಿ?
---------------------
ಆಯುರ್ವೇದವು ದೇಶದ ಸಂಸ್ಕೃತಿ, ಜೀವನ ಶೈಲಿಯಾಗಿದೆ - ದಿನೇಶ್‌ಗುಂಡೂರಾವ್, ಶಾಸಕ
  ಆದರೆ ಪರಿಣಾಕಾರಿ ಔಷಧಿಯಾಗುವುದು ಮೊದಲ ಅಗತ್ಯವಲ್ಲವೇ?

---------------------
ರಾಕ್ಷಸರ ರಾಜ್ಯದಲ್ಲಿರುವ ಪುಣ್ಯಕೋಟಿ ನಾನು - ಜನಾರ್ದನ ರೆಡ್ಡಿ. ಮಾಜಿ ಸಚಿವ
ಕೋಟಿ ಕೋಟಿ ಹಣ ಸಂಗ್ರಹಿಸಿದ ಕಾರಣಕ್ಕಿರಬೇಕು.

---------------------
ನರೇಂದ್ರ ಮೋದಿ ಇನ್ನೊಂದು ಅವಧಿಗೂ ಪ್ರಧಾನಿಯಾಗಿ ಮುಂದುವರಿಯಲಿ - ಎನ್.ಆರ್. ನಾರಾಯಣಮೂರ್ತಿ, ಇನ್ಫೋಸಿಸ್ ಸಹ ಸಂಸ್ಥಾಪಕ
ಉದ್ಯಮಿಗಳಿಗೆ ದೇಶವನ್ನು ದೋಚುವುದು ಇನ್ನೂ ಉಳಿದಿದೆ ಎಂದಾಯಿತು.
---------------------

ಕಾಶ್ಮೀರವನ್ನು ಭಾರತಕ್ಕೆ ಕೊಡುವ ಬದಲು ಸ್ವತಂತ್ರ ರಾಷ್ಟ್ರ ಮಾಡಿ - ಶಾಹಿದ್ ಅಫ್ರಿದಿ, ಮಾಜಿ ಕ್ರಿಕೆಟಿಗ
ಮೊದಲು ಕಾಶ್ಮೀರಿಗಳಿಗೆ ಮಾತನಾಡುವ ಸ್ವಾತಂತ್ರ ಕೊಡಿ.

---------------------
ಭಯೋತ್ಪಾದನೆಯ ಉಗಮ ಸ್ಥಾನ ಪಾಕಿಸ್ತಾನ - ನರೇಂದ್ರ ಮೋದಿ, ಪ್ರಧಾನಿ
  ದಾಭೋಲ್ಕರ್, ಗೌರಿ ಲಂಕೇಶ್ ಮೊದಲಾದವರನ್ನು ಕೊಂದದ್ದು ಪಾಕಿಸ್ತಾನದಿಂದ ಬಂದವರೇ?
---------------------
ಇತಿಹಾಸ ತಿರುಚುವವರು ಅಧಿಕಾರಕ್ಕೇರಿರುವುದು ಇಂದಿನ ದುರಂತ - ವೀರಪ್ಪ ಮೊಯ್ಲಿ, ಸಂಸದ
ನಿಮ್ಮ ಮಹಾಕಾವ್ಯಗಳೇ ಅವರಿಗೆ ಪ್ರೇರಣೆಯಂತೆ.

---------------------

ನಾಳೆ ನಾನು ಸತ್ತರೆ ಒಬ್ಬ ಸಮಾಜ ಸೇವಕ ಸತ್ತ ಎನ್ನಿ ಸಾಕು, ಜಾತಿಗೆ ಸೀಮಿತಗೊಳಿಸಬೇಡಿ - ಸಿಎಂ ಇಬ್ರಾಹೀಂ, ಕಾಂಗ್ರೆಸ್ ಮುಖಂಡ
ಅದಕ್ಕಾಗಿಯಾದರೂ ಒಂದಿಷ್ಟು ಸಮಾಜ ಸೇವೆ ಮಾಡಿ.

---------------------
  ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾನೇನು ತಲೆಕೆಡಿಸಿಕೊಂಡಿಲ್ಲ - ಎಚ್.ಡಿ.ರೇವಣ್ಣ , ಸಚಿವ
ನೀವು ಕುಮಾರಸ್ವಾಮಿಯ ತಲೆಕೆಡಿಸಿದ್ದೀರಿ ಎನ್ನುವ ಆರೋಪ.

---------------------
ಮೈತ್ರಿ ಸರಕಾರದಲ್ಲಿ ಸಚಿವ ಸ್ಥಾನ ನೀಡಿದರೆ ಯಶಸ್ವಿಯಾಗಿ ನಿಭಾಯಿಸುತ್ತೇನೆ - ಅನಿತಾಕುಮಾರಸ್ವಾಮಿ, ಶಾಸಕಿ
ಉಪಮುಖ್ಯಮಂತ್ರಿಯಾಗಿದ್ದರೆ ಕುಮಾರಸ್ವಾಮಿಯವರಿಗೂ ಒಂದಿಷ್ಟು ಅನುಕೂಲವಾಗುತ್ತಿತ್ತು.

---------------------
ವಿದ್ಯಾರ್ಥಿಗಳು ಮುಂದಿನ ಸಮಾಜದ ಸಾವಯವ ಗೊಬ್ಬರಗಳಿದ್ದಂತೆ - ವಿನಯಾಪ್ರಸಾದ್, ನಟಿ
ಆದರೆ ಅದಕ್ಕಾಗಿ ಅವರ ತಲೆಯೊಳಗೆ ಗೊಬ್ಬರ ತುಂಬಿಸುವುದು ತಪ್ಪು.

---------------------

12 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದೇನೆ ಆದರೆ, ಈ ತನಕ ನನಗೆ ಮೀಟೂ ಅನುಭವ ಆಗಿಲ್ಲ - ಶುಭಾ ಪೂಂಜಾ, ನಟಿ
ನಿರಾಶೆಯಿಂದ ಹೇಳುತ್ತಿರುವ ಹಾಗಿದೆ?
---------------------
  ರಾಹುಲ್ ಗಾಂಧಿಯಂತಹ ಸಾವಿರ ಜನ ಬಂದರೂ ಆರೆಸ್ಸೆಸ್ ನಿಷೇಧ ಸಾಧ್ಯವಿಲ್ಲ - ಸಿ.ಟಿ.ರವಿ, ಶಾಸಕ
ಅಂದು ಕಾಂಗ್ರೆಸ್ ನೀರೆರೆದ ವಿಷದ ಗಿಡ, ಈಗ ಮರವಾಗಿದೆ.
---------------------

ದೇಶದ ಚೌಕಿದಾರ ಎಂದು ಹೇಳಿಕೊಳ್ಳುವ ಪ್ರಧಾನಿ ಮೋದಿ ಅಂಬಾನಿಯಂತಹ ಬೆರಳೆಣಿಕೆಯಷ್ಟು ಉದ್ಯಮಿಗಳ ಕಾವಲುಗಾರನಾಗಿದ್ದಾರೆ - ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
ಜನಸಾಮಾನ್ಯರ ಮನೆ ಕಾಯಲು ಅಲ್ಲೇನಿದೆ? ಎಲ್ಲ ಬ್ಯಾಂಕ್‌ಗಳ ಪಾಲಾಗಿದೆ.

---------------------
  ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮನ್ನು ಅವಹೇಳನ ಮಾಡುವವರು ಹೆಚ್ಚುತ್ತಿದ್ದಾರೆ - ಶೋಭಾ ಕರಂದ್ಲಾಜೆ, ಸಂಸದೆ
ನಿಮ್ಮಂಥವರೇ ಹಿಂದೂ ಧರ್ಮಕ್ಕೆ ಅತಿ ದೊಡ್ಡ ಅವಮಾನ.

---------------------
ಅಧಿಕಾರ ಸಿಗದಿದ್ದರೂ ಸರಿ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜತೆ ಕೈಜೋಡಿಸೊಲ್ಲ - ಮಾಯಾವತಿ, ಬಿಎಸ್ಪಿ ನಾಯಕಿ
ಬಿಜೆಪಿಯ ಜೊತೆಗೆ ಕೈ ಜೋಡಿಸಲಿದ್ದೇನೆ ಎಂದೇ ಹೇಳಿ ಬಿಡಿ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು