varthabharthi


ಓ ಮೆಣಸೇ

ಓ ಮೆಣಸೇ....

ವಾರ್ತಾ ಭಾರತಿ : 26 Nov, 2018

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿ ಆಗುವ ಆಸೆಯನ್ನು ಹೇಳಿಕೊಂಡಿರುವುದರಲ್ಲಿ ತಪ್ಪೇನಿಲ್ಲ - ದೇವೇಗೌಡ, ಮಾಜಿ ಪ್ರಧಾನಿ
ಹೇಳಿಕೊಳ್ಳುವುದರಿಂದ ತಪ್ಪಿಲ್ಲ, ಕೇಳಿದರೆ ಮಾತ್ರ ತಪ್ಪು.

---------------------
ನಾನು ಅಮೆರಿಕದ ಅಧ್ಯಕ್ಷನಾಗಿ ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ನನಗನಿಸುತ್ತದೆ -ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಮೋದಿಯೂ ಕೂಡ ಅದನ್ನೇ ಹೇಳುತ್ತಿದ್ದಾರೆ.

---------------------
ಕ್ಷಣಿಕ ರಾಜಕಾರಣದಿಂದ ಕರ್ನಾಟಕ ಒಡೆಯದು - ವೈ.ಎಸ್.ವಿ.ದತ್ತ, ಮಾಜಿ ಶಾಸಕ
  ಒಡೆಯದೇ ರಾಜಕಾರಣ ಮಾಡುವುದು ಹೇಗೆ?
---------------------
ರಾಜ್ಯ ಸಚಿವ ಸಂಪುಟದಲ್ಲಿ ಇಷ್ಟೊಂದು ಸಚಿವ ಸ್ಥಾನ ಖಾಲಿ ಇರುವುದು ಸರಿಯಲ್ಲ - ಎಚ್.ಎಂ.ರೇವಣ್ಣ , ವಿ.ಪ.ಸದಸ್ಯ
ನಾಡಿನ ಖಜಾನೆಗೆ ಅಷ್ಟರ ಮಟ್ಟಿಗೆ ಉಳಿತಾಯವಾಯಿತು ಎಂದು ತಿಳಿಯಿರಿ.

---------------------
ಮೋಸ ಎಂಬುದು ಕಾಂಗ್ರೆಸ್‌ಗೆ ರಕ್ತಗತವಾಗಿ ಬಂದಿದೆ - ನರೇಂದ್ರಮೋದಿ, ಪ್ರಧಾನಿ
ನಿಮ್ಮದೇನಿದ್ದರೂ ಮೋಸದ ಜೊತೆಗೆ ರಕ್ತಪಾತ.

---------------------
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೋಟು ಪ್ರಿಂಟ್ ಮಾಡುವ ಯಂತ್ರ ಇಟ್ಟಿಲ್ಲ - ಎಚ್.ಡಿ.ರೇವಣ್ಣ, ಸಚಿವ
ಬಹುಶಃ ಅದನ್ನು ಝಮೀರ್ ಅವರು ಎತ್ತಿಕೊಂಡು ಹೋಗಿರಬೇಕು.

---------------------
ಸನಾತನ ಹಿಂದೂ ಧರ್ಮ ಉಳಿಯಬೇಕಾದರೆ ಬ್ರಾಹ್ಮಣರೆಲ್ಲ ಒಂದಾಗಬೇಕು - ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ಹೌದು, ಸ್ವತಂತ್ರ ಬ್ರಾಹ್ಮಣ ಧರ್ಮಕ್ಕಾಗಿ ಹೋರಾಟ ನಡೆಸಬೇಕು.

---------------------
ದೇಶ ಬದಲಾಗಬೇಕಾದರೆ ಮೊದಲು ನಾವು ಬದಲಾಗಬೇಕು - ಯು.ಟಿ.ಖಾದರ್, ಸಚಿವ
 ಮತ್ತೇಕೆ ತಡ? ಬದಲಾಗಿ.

---------------------
ಬಿಜೆಪಿ ನಾಯಕರು ಹಿಟ್ಲರ್ ವಂಶಸ್ಥರು - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಅದರ ಕುರಿತಂತೆ ಅವರಿಗೆ ಹೆಮ್ಮೆಯಿದೆ.

---------------------
ಸಿ.ಎಂ.ಕುಮಾರಸ್ವಾಮಿಗೆ ಮಹಿಳೆಯರ ಮೇಲೆ ಅಪಾರ ಗೌರವವಿದೆ. ಅವರು ನನ್ನನ್ನು ಕೂಡಾ ಅಕ್ಕಾ ಎಂದೇ ಮಾತನಾಡಿಸುತ್ತಾರೆ - ಮೋಟಮ್ಮ, ಮಾಜಿ ಸಚಿವೆ
ಪ್ರಾಯದಲ್ಲಿ ನಿಮಗಿಂತ ಕಿರಿಯ ಎನ್ನುವ ಹೆಮ್ಮೆ ಅವರಿಗೆ

---------------------
ಇಂದಿರಾ ಗಾಂಧಿ ಘೋಷಿಸಿದ್ದ ತುರ್ತು ಪರಿಸ್ಥಿತಿಗಿಂತಲೂ ದೇಶದ ಇಂದಿನ ಪರಿಸ್ಥಿತಿ ದಾರುಣವಾಗಿದೆ - ಅರುಣ್‌ಶೌರಿ, ಮಾಜಿ ಕೇಂದ್ರ ಸಚಿವ
ಇದಕ್ಕಿಂತ ಇಂದಿರಾಗಾಂಧಿಯ ತುರ್ತುಪರಿಸ್ಥಿತಿಯೇ ವಾಸಿ ಎಂದರಂತೆ, ಆ ಕಾಲದಲ್ಲಿ ಭೂಸುಧಾರಣೆಯಿಂದ ಭೂಮಿ ಪಡೆದುಕೊಂಡವರು.

---------------------
ಕರ್ನಾಟಕದ ರೈತರಿಗೆ ವಾರಂಟ್ ಜಾರಿ ಮಾಡಿಸಿದ್ದು ಪ್ರಧಾನಿ ಮೋದಿ, ನಾನಲ್ಲ - ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಮಲ್ಯರಿಗೆಂದು ಜಾರಿಗೊಳಿಸಿದ ವಾರಂಟ್ ತಪ್ಪಿ ಕರ್ನಾಟಕದ ರೈತರಿಗೆ ಬಂದಿದ್ದಂತೆ.

---------------------
ಪ್ರತಿಪಕ್ಷಗಳು ಮೋದಿ ಫೋಬಿಯಾದಿಂದ ನರಳುತ್ತಿದೆ - ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಇಡೀ ದೇಶ ಮೋದಿ ರೋಗದಿಂದ ಕೊಳೆಯುತ್ತಿದೆ.

---------------------
ಮಹಿಳೆ ಎಂದರೆ ಸಂಘರ್ಷ -ಲಕ್ಷ್ಮೀ ಹೆಬ್ಬಾಳ್ಕರ್, ಕೆಪಿಸಿಸಿ ಮಹಿಳಾ ಘಟಕದ ನಿಕಟ ಪೂರ್ವ ಅಧ್ಯಕ್ಷೆ
ಸಚಿವ ಸ್ಥಾನಕ್ಕಾಗಿ ಸಂಘರ್ಷ.
---------------------

ನಂಬಿಕೆ ದ್ರೋಹ, ವಿಶ್ವಾಸ ದ್ರೋಹಕ್ಕೆ ಮತ್ತೊಂದು ಹೆಸರು ಎಚ್.ಡಿ.ದೇವೇಗೌಡರು ಮತ್ತು ಕುಮಾರಸ್ವಾಮಿ -ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಅನಂತಕುಮಾರ್, ಈಶ್ವರಪ್ಪರನ್ನು ಪಟ್ಟಿಯಿಂದೇಕೆ ಬಿಟ್ಟಿರಿ?

---------------------
ಮುಂದಿನ ಮೂರು ಅವಧಿಗೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು, ಇಲ್ಲದಿದ್ದರೆ ಭಾರತ ಉದ್ಧಾರವಾಗದು -ಎಸ್.ಎಲ್.ಬೈರಪ್ಪ, ಸಾಹಿತಿ
ಅಂತೂ ನೀವು ಬದುಕಿರುವವರೆಗೆ ರಾಷ್ಟ್ರೀಯ ಪ್ರೊಫೆಸರ್ ಆಗಿರಬೇಕು.

---------------------
ಮರಳಿಗಾಗಿ ಜನ ದಂಗೆ ಏಳಬೇಕು - ಎಂ.ಪಿ.ರೇಣುಕಾಚಾರ್ಯ, ಶಾಸಕ
ಜನ ಉಣ್ಣುವ ಅನ್ನಕ್ಕಾಗಿ ದಂಗೆಯೇಳುವ ದಿನಗಳು ಇವು.

---------------------
ಕುದುರೆ ವ್ಯಾಪಾರ ಜೋರಾಗಿದ್ದಕ್ಕೆ ಜಮ್ಮು - ಕಾಶ್ಮೀರ ವಿಧಾನ ಸಭೆ ವಿಸರ್ಜಿಸಬೇಕಾಯಿತು - ಸತ್ಯಪಾಲ್ ಮಲಿಕ್, ಜಮ್ಮು - ಕಾಶ್ಮೀರ ರಾಜ್ಯಪಾಲ
ಕತ್ತೆಯ ಕೈಯಲ್ಲಿ ಅಧಿಕಾರ ಕೊಟ್ಟರೆ ಅದು ವಿಸರ್ಜಿಸದೆ ಇನ್ನೇನು ಮಾಡುತ್ತದೆ?
---------------------

ಮೋಜು, ಮಸ್ತಿ ತುಂಬಾ ದಿನ ನಡೆಯುವುದಿಲ್ಲ - ಶ್ರೀರಾಮುಲು, ಶಾಸಕ
ಉಪಚುನಾವಣೆಯಲ್ಲಿ ಮತದಾರ ಅದನ್ನೇ ನಿಮಗೆ ಹೇಳಿದ್ದು.

---------------------
ಸತ್ತರೂ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವುದಿಲ್ಲ - ಬಸವರಾಜ ಹೊರಟ್ಟಿ, ಮೇಲ್ಮನೆ ಸಭಾಪತಿ
ಸತ್ತ ಮೇಲೆ ಸಚಿವ ಸ್ಥಾನ ಯಾಕೆ?

---------------------
ಯಾವ ರಾಜಕೀಯ ಪಕ್ಷವೂ ಪರ್ಫೆಕ್ಟ್ ಆಗಿರುವುದಿಲ್ಲ - ರಾಜನಾಥ್‌ಸಿಂಗ್, ಕೇಂದ್ರ ಸಚಿವ
ಕೊನೆಗೂ ನಿಮ್ಮ ಪಕ್ಷ ಪರ್ಫೆಕ್ಟ್ ಅಲ್ಲ ಎನ್ನುವುದನ್ನು ಒಪ್ಪಿಕೊಂಡಿರಿ.

---------------------
ಗೋವುಗಳ ಹತ್ಯೆ ನಡೆಯುತ್ತಿರುವುದರಿಂದ ಭಾರತವು ಅಪಾಯದ ಅಂಚಿನಲ್ಲಿದೆ - ರಾಮ ಜೋಯಿಸ್, ಬಿಹಾರದ ಮಾಜಿ ರಾಜ್ಯಪಾಲ
ಮನುಷ್ಯ ಹತ್ಯೆ ನಡೆಯುತ್ತಿರುವುದರಿಂದ ಭಾರತ ಯಾವ ಅಂಚಿನಲ್ಲಿದೆ?

---------------------
ಎಲ್ಲಿಯೇ ಇದ್ದರೂ ಮಾತೃ ಭಾಷೆಯಲ್ಲಿಯೇ ಮಾತನಾಡಿ - ರವಿಶಂಕರ್ ಗುರೂಜಿ, ದಿ ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ
ಹಣೇ ಆರ್ಟ್ ಆಫ್ ಲಿವಿಂಗ್‌ನ ಮಾತೃಭಾಷೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು