ಸೌದಿ ಅರೇಬಿಯಾದಲ್ಲಿ ಮತ್ತೆ ಧಾರಾಕಾರ ಮಳೆ
ರಿಯಾದ್, ನ. 30: ಸೌದಿ ಅರೇಬಿಯಾದ ಮದೀನಾ ಮುನವ್ವರದಲ್ಲಿ ಮತ್ತೆ ಧಾರಾಕಾರ ಮಳೆಯಾಗಿದೆ. ಕಳೆದ ಒಂದು ವಾರದಿಂದ ಮೋಡ ಕವಿದ ವಾತಾವರಣವಿದ್ದು, ಶುಕ್ರವಾರ ಸಂಜೆಯ ವೇಳೆ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗಿದೆ.
ಬಿರುಸಿನ ಮಳೆಯಿಂದ ಕೆಲವಡೆ ರಸ್ತೆ ಸಂಚಾರಕ್ಕೆ ಅಲ್ಪ ಪ್ರಮಾಣದ ಅಡೆತಡೆಯುಂಟಾಗಿದ್ದು, ಮಳೆಯಿಂದ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನಗಳು ಕೆಸರೆರಚುವ ದೃಶ್ಯ ಕಾಣುತಿತ್ತು.
Next Story