varthabharthi

ರಾಷ್ಟ್ರೀಯ

ಬುಲಂದ್‍ ಶಹರ್ ಹಿಂಸಾಚಾರ

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪೊಲೀಸ್ ಅಧಿಕಾರಿ ಅಖ್ಲಾಕ್ ಹತ್ಯೆ ಪ್ರಕರಣದ ತನಿಖಾಧಿಕಾರಿ

ವಾರ್ತಾ ಭಾರತಿ : 4 Dec, 2018

ಬುಲಂದ್‍ಶಹರ್, ಡಿ.4: ಬುಲಂದ್‍ ಶಹರ್ ಹಿಂಸಾಚಾರದಲ್ಲಿ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಅವರ ಹತ್ಯೆಗೆ ಸಾಕ್ಷಿಯಾಗಿದ್ದ ಸಬ್-ಇನ್‍ಸ್ಪೆಕ್ಟರ್ ಸುರೇಶ್ ಕುಮಾರ್ ಅವರು ಘಟನೆಯನ್ನು ನೆನಪಿಸುತ್ತಾ ಸುಮಾರು 300ರಿಂದ 500ರಷ್ಟಿದ್ದ ಜನರ ಗುಂಪು ಪೊಲೀಸರ ಮೇಲೆ ದಾಳಿ ನಡೆಸಿತ್ತೆಂದು ಹೇಳಿದ್ದಾರೆ.

“ಉದ್ರಿಕ್ತ ಜನರ ಗುಂಪು ರಸ್ತೆಯನ್ನು ಬಂದ್ ಮಾಡಿ ಪೊಲೀಸರತ್ತ ಕಲ್ಲು ತೂರಾಟ ಆರಂಭಿಸಿತ್ತು.  ನನಗೂ ಗಾಯಗಳಾದವು. ನಂತರ ಏನಾಯಿತೆಂದು  ನನಗೆ ಗೊತ್ತಿಲ್ಲ'' ಎಂದಿದ್ದಾರೆ.

“ಗೋಹತ್ಯೆ ನಡೆದಿದೆಯೆಂಬ ಬಗ್ಗೆ ಮಾಹಿತಿ ದೊರೆತು ಸ್ಥಳಕ್ಕೆ ಧಾವಿಸಿದ್ದರು. ಅಲ್ಲಿ ದನದ ದೇಹದ ಭಾಗಗಳು ಪತ್ತೆಯಾಗಿದ್ದವು. ಅವುಗಳನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಲಾಗುವುದು ಎಂದು ನಾವು ಜನರಿಗೆ ತಿಳಿಸಿದೆವು. ಅಲ್ಲಿ ಸಂಪೂರ್ಣ ಗದ್ದಲವಿತ್ತು. ಜನರ ಹೇಳಿಕೆಗಳನ್ನು ನಮ್ಮ ಅಧಿಕಾರಿಗಳು ಗಣನೆಗೆ ತೆಗೆದುಕೊಂಡರು. ಎಲ್ಲರ ಹೇಳಿಕೆಗಳೂ ಭಿನ್ನವಾಗಿತ್ತು, ನಾವು ಅವರಿಗೆ ಪರಿಸ್ಥಿತಿಯನ್ನು ಅರ್ಥೈಸಲು ಯತ್ನಿಸಿದರೂವಿಫಲರಾದೆವು'' ಎಂದು ಸುರೇಶ್ ಕುಮಾರ್ ಹೇಳಿದರು.

ಹತ್ಯೆಗೀಡಾದ ಸುಬೋಧ್ ಕುಮಾರ್ ಸಿಂಗ್ ತಮಗೆ ಹಿರಿಯ ಸೋದರನಂತಿದ್ದರು, ತುಂಬಾ ಒಳ್ಳೆಯ ವ್ಯಕ್ತಿ ಎಂದೂ ಅವರು ಹೇಳಿದರು. ಹತ್ಯೆಗೀಡಾದ ಸಿಂಗ್ ಅವರು ಅಖ್ಲಾಕ್ ಗುಂಪು ಥಳಿತ ಪ್ರಕರಣದ ತನಿಖಾಧಿಕಾರಿಯಾಗಿದ್ದರೆಂಬುದು ಇಲ್ಲಿ ಉಲ್ಲೇಖಾರ್ಹ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)