varthabharthi

ನಿಧನ

ಶೇಖರ ಶೆಟ್ಟಿ

ವಾರ್ತಾ ಭಾರತಿ : 4 Dec, 2018

ಉಡುಪಿ, ಡಿ.4: ನಿವೃತ್ತ ಮುಖ್ಯೋಪಾಧ್ಯಾಯ ನಿಂಜೂರು ಶೇಖರ ಶೆಟ್ಟಿ ಅವರು ಸೋಮವಾರ ಉಡುಪಿಯಲ್ಲಿ ವಯೋಸಹಜ ಕಾರಣ ದಿಂದ ನಿಧನರಾದರು. ಅವರಿಗೆ 92 ವರ್ಷ ಪ್ರಾಯವಾಗಿತ್ತು. ಶೇಖರ ಶೆಟ್ಟಿ ಅವರು ಪತ್ನಿ ಕೊರಂಗ್ರಪಾಡಿ ದೊಡ್ಡಮನೆ ಉಮಾ ಶೆಟ್ಟಿ, ಮೂವರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಮೂಲತಃ ಆತ್ರಾಡಿಯ ಪರೀಕ ಪಡುಮನೆ ಕುಟುಂಬದ ಶೇಖರ ಶೆಟ್ಟಿ ಅವರು ನಿಂಜೂರಿನ ತಮ್ಮ ತಂದೆ ಮನೆಯಲ್ಲಿ ಬೆಳೆದು, ಅಲ್ಲಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದ್ದರು. ನಂತರ, ಪಳ್ಳಿ ರೆಂಜಾಳ, ಆತ್ರಾಡಿ, ಕಲ್ಯಾಣಪುರ ಮೊದಲಾದೆಡೆ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು. ಅಧ್ಯಾಪಕ ವೃತ್ತಿಯೊಂದಿಗೆ ಖಾಸಗಿಯಾಗಿ ವಿದ್ಯಾಭ್ಯಾಸ ಮುಂದುವರಿಸಿ ತಮ್ಮ 50ನೇ ವಯಸ್ಸಿನಲ್ಲಿ ಧಾರವಾಡ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ(ಎಂಎ) ಪಡೆದಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)