varthabharthi

ಗಲ್ಫ್ ಸುದ್ದಿ

ಅತ್ಯಂತ ಹೆಚ್ಚು ಜನರು ಭೇಟಿ ನೀಡಿದ ನಗರಗಳ ಪೈಕಿ ದುಬೈ

ವಾರ್ತಾ ಭಾರತಿ : 5 Dec, 2018

ದುಬೈ, ಡಿ. 5: 2018ರಲ್ಲಿ ಅತ್ಯಂತ ಹೆಚ್ಚು ಜನರು ಭೇಟಿ ನೀಡಿದ 100 ನಗರಗಳ ‘ಯುರೋಮೋನಿಟರ್’ ಪಟ್ಟಿಯಲ್ಲಿ ದುಬೈ 7ನೇ ಸ್ಥಾನದಲ್ಲಿದೆ. ಕಳೆದ ವರ್ಷ ಅದು 6ನೇ ಸ್ಥಾನದಲ್ಲಿತ್ತು.

ನ್ಯೂಯಾರ್ಕ್, ಟೋಕಿಯೊ ಹಾಗೂ ಯುರೋಪ್ ಮತ್ತು ಅಮೆರಿಕ ಖಂಡಗಳ ಇತರ ಜನಪ್ರಿಯ ನಗರಗಳನ್ನು ಅದು ಹಿಂದಿಕ್ಕಿದೆ.

ಪಟ್ಟಿಯಲ್ಲಿ ಈ ಬಾರಿಯೂ ಏಶ್ಯದ ನಗರಗಳು ಅಗ್ರ ಸ್ಥಾನಗಳಲ್ಲಿವೆ. ಹಾಂಕಾಂಗ್ ಪ್ರಥಮ ಸ್ಥಾನದಲ್ಲಿದ್ದರೆ, ಬ್ಯಾಂಕಾಕ್ ಎರಡನೇ ಸ್ಥಾನದಲ್ಲಿದೆ.

ಅಗ್ರ 10ರ ಪಟ್ಟಿಯಲ್ಲಿ ಸಿಂಗಾಪುರ, ಮಕಾವು, ಕೌಲಾಲಂಪುರ ಮತ್ತು ಶೆಂಝನ್ ನಗರಗಳಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)