varthabharthi

ಕ್ರೀಡೆ

ಒಂದೇ ಕೈಯಲ್ಲಿ ಕ್ಯಾಚ್ ಪಡೆದು ಕೊಹ್ಲಿಯನ್ನು ಪೆವಿಲಿಯನ್‌ಗೆ ಕಳುಹಿಸಿದ ಖ್ವಾಜಾ

ವಾರ್ತಾ ಭಾರತಿ : 6 Dec, 2018

ಅಡಿಲೇಡ್, ಡಿ.6: ಅಡಿಲೇಡ್ ಓವಲ್‌ನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಅವರ ಅಮೋಘ ಬ್ಯಾಟಿಂಗ್ ದಾಖಲೆಗೆ ಉಸ್ಮಾನ್ ಖ್ವಾಜಾ ಕಡಿವಾಣ ಹಾಕಿದ್ದಾರೆ.

 ಇಲ್ಲಿ ಗುರುವಾರ ಆರಂಭವಾದ ಮೊದಲ ಟೆಸ್ಟ್‌ನ ಮೊದಲ ದಿನದಾಟದಲ್ಲಿ 11ನೇ ಓವರ್‌ನಲ್ಲಿ ಪ್ಯಾಟ್ ಕಮಿನ್ಸ್ ಎಸೆತವನ್ನು ಕೆಣಕಲು ಹೋದ ಕೊಹ್ಲಿ ಗಲ್ಲಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಖ್ವಾಜಾ ಒಂದೇ ಕೈಯಲ್ಲಿ ಪಡೆದ ಅದ್ಭುತ  ಕ್ಯಾಚ್‌ಗೆ ಔಟಾದರು. ಆಗ ಭಾರತ 19 ರನ್‌ಗೆ 3ನೇ ವಿಕೆಟ್ ಕಳೆದುಕೊಂಡಿತು.

16 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿ ಔಟಾದ ಕೊಹ್ಲಿ ಒಂದೂವರೆ ವರ್ಷದ ಬಳಿಕ ಕಮಿನ್ಸ್‌ಗೆ ಮತ್ತೊಮ್ಮೆ ಔಟಾದರು. ಈ ಹಿಂದೆ ಆಸ್ಟೇಲಿಯ ತಂಡ ಭಾರತ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ರಾಂಚಿ ಟೆಸ್ಟ್‌ನಲ್ಲಿ ಕೊಹ್ಲಿ ಅವರು ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)