varthabharthi

ವಿಶೇಷ-ವರದಿಗಳು

ವಯಸ್ಕರಿಗೂ ಲಸಿಕೆಯ ಅಗತ್ಯವಿದೆ ಎನ್ನುವುದು ನಿಮಗೆ ಗೊತ್ತೇ?

ವಾರ್ತಾ ಭಾರತಿ : 6 Dec, 2018

ವಯಸ್ಕರ ವ್ಯಾಕ್ಸಿನ್ ಅಥವಾ ಲಸಿಕೆಯ ಬಗ್ಗೆ ನೀವು ಯಾರನ್ನೇ ಪ್ರಶ್ನಿಸಿದರೂ ಲಸಿಕೆಗಳಿರುವುದು ಮಕ್ಕಳಿಗಾಗಿ ಮಾತ್ರ ಎನ್ನುವ ಉತ್ತರವೇ ಹೆಚ್ಚಾಗಿ ಲಭಿಸುತ್ತದೆ. ಆದರೆ ನಾವು ವಯಸ್ಕರಾದರೂ ನಮ್ಮ ಲಸಿಕೆ ಅಗತ್ಯಕ್ಕೆ ವಯಸ್ಸಾಗುವುದಿಲ್ಲ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ವಾಸ್ತವದಲ್ಲಿ ನಮಗೆ ವಯಸ್ಸಾದಾಗ ನಮ್ಮ ಶರೀರದ ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ ಮತ್ತು ಇದರಿಂದಾಗಿ ನಾವು ವಿವಿಧ ಕಾಯಿಲೆಗಳಿಗೆ ತುತ್ತಾಗುವ ಅಪಾಯವೂ ಹೆಚ್ಚುತ್ತದೆ.

► ವಯಸ್ಕರಿಗೆ ಲಸಿಕೆಗಳು ಏಕೆ ಅಗತ್ಯ?

ಮಕ್ಕಳಲ್ಲಿರುವಂತೆ ವಯಸ್ಕರಲ್ಲಿ ಲಸಿಕೆಗಳು ಧನುರ್ವಾತ, ನ್ಯುಮೋನಿಯಾ,ಇನ್‌ಫ್ಲುಯೆಂಜಾ,ಟೈಫಾಯಿಡ್ ಮತ್ತು ಕಾಮಾಲೆಗಳಂತಹ ವಿವಿಧ ಕಾಯಿಲೆಗಳ ಅಪಾಯವನ್ನು ತಡೆಯುತ್ತವೆ. ಆದರೆ ಇದು ವ್ಯಕ್ತಿಯ ವಯಸ್ಸು,ಪ್ರವಾಸ ಯೋಜನೆ,ಜೀವನಶೈಲಿ ಮತ್ತುಆರೋಗ್ಯ ಸ್ಥಿತಿ ಇವೇ ಮುಂತಾದ ಹಲವಾರು ಅಂಶಗಳನ್ನು ಅವಲಂಬಿಸಿರು ತ್ತದೆ. ಅಲ್ಲದೆ ಬಾಲ್ಯದಲ್ಲಿ ಲಸಿಕೆಗಳನ್ನು ತೆಗೆದುಕೊಂಡಿರು ವುದನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಏಕೆಂದರೆ ವ್ಯಕ್ತಿಯು ಬಾಲ್ಯದಲ್ಲಿ ಲಸಿಕೆಗಳನ್ನು ತೆಗೆದುಕೊಂಡಿ ರಬಹುದು,ಆದರೆ ಅಂತಹ ವ್ಯಕ್ತಿಗೆ ಕೆಲವು ಕಾಯಿಲೆಗಳ ವಿರುದ್ಧ ರಕ್ಷಣೆಯನ್ನು ಒದಗಿಸಲು ನಂತರದ ಸಮಯ ದಲ್ಲಿ ಬೂಸ್ಟರ್ ಡೋಸ್ ನೀಡುವ ಅಗತ್ಯವಿರುತ್ತದೆ. ವಯಸ್ಕರು ಲಸಿಕೆಗಳನ್ನು ಏಕೆ ತೆಗೆದುಕೊಳ್ಳಬೇಕು ಎನ್ನುವುದಕ್ಕೆ ಕಾರಣಗಳಿಲ್ಲಿವೆ.

 ಹಲವಾರು ಬ್ಯಾಕ್ಟೀರಿಯಾಗಳು ಮತ್ತು ವೈರಸ್‌ಗಳು ಮಾನವರಲ್ಲಿ ಮಾರಣಾಂತಿಕ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ. ಲಸಿಕೆಗಳಿಂದ ಸಂರಕ್ಷಿತರಾಗಿರದ ಜನರಲ್ಲಿ ಇಂತಹ ಸೋಂಕುಗಳು ವರ್ಗಾವಣೆಯಾಗುವ ಅಪಾಯವು ಹೆಚ್ಚಿರುತ್ತದೆ.

ಸರ್ಪಸುತ್ತು ಅಥವಾ ದದ್ದುಗಳಂತಹ ಕೆಲವು ರೋಗಗಳು ವಯಸ್ಕರಲ್ಲಿ ಕಾಣಿಸಿಕೊಳ್ಳಬಲ್ಲವು. ಹೀಗಾಗಿ ಇವುಗಳಿಂದ ರಕ್ಷಣೆ ಪಡೆಯಲು ಲಸಿಕೆಗಳನ್ನು ಹಾಕಿಸಿಕೊಳ್ಳುವುದು ಒಳ್ಳೆಯ ಉಪಾಯವಾಗಿದೆ.

ಸೋಂಕು ಅಥವಾ ಕಾಮಾಲೆಯಂತಹ ರೋಗಗಳನ್ನು ್ಝಲಸಿಕೆಗಳ ಮೂಲಕ ತಡೆಯಬಹುದಾಗಿದೆ. ಇದು ಸೋಂಕುಪೀಡಿತರಾದಾಗ ನಮ್ಮ ಆಸ್ಪತ್ರೆ ವಾಸದ ಅವಧಿಯನ್ನು ತಗ್ಗಿಸುವ ಜೊತೆಗೆ ಈ ಸೋಂಕುಗಳು ಉಂಟು ಮಾಡುವ ಕಾಯಿಲೆಗಳಿಂದ ನಾವು ನರಳುವುನ್ನು ತಪ್ಪಿಸುತ್ತದೆ.

ಮಧುಮೇಹಿಗಳು,ವಯಸ್ಕರಂತಹ ಕೆಲವು ಗುಂಪುಗಳ ಜನರು ಸೋಂಕುಗಳಿಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಇಂತಹ ವ್ಯಕ್ತಿಗಳು ಆರೋಗ್ಯಯುತರಾಗಿದ್ದರೂ ಮುಂಜಾಗ್ರತೆ ಕ್ರಮವಾಗಿ ಲಸಿಕೆಗಳನ್ನು ಹಾಕಿಸಿಕೊಳ್ಳುವುದು ಭವಿಷ್ಯದ ಅಪಾಯವನ್ನು ನಿವಾರಿಸುತ್ತದೆ.

ಲ್ಯಾಬರೇಟರಿ,ಆಸ್ಪತ್ರೆಗಳಂತಹ ಆರೋಗ್ಯ ರಕ್ಷಣೆ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ರೋಗಿಗಳ ಶರೀರದಲ್ಲಿಯ ದ್ರವಗಳು ಮತ್ತು ರಕ್ತದ ಸಂಪರ್ಕವನ್ನು ಹೊಂದಿದಾಗ ಸೋಂಕಿಗೆ ತುತ್ತಾಗುವ ಅವಕಾಶವಿರುತ್ತದೆ. ಅಂತಹವರು ದಡಾರ,ಕೆಪ್ಪಟ,ಮಂಗನ ಬಾವು ಅಥವಾ ಕಾಮಾಲೆಯಂತಹ ರೋಗಗಳ ವಿರುದ್ಧ್ದ ಲಸಿಕೆಗಳನ್ನು ಪಡೆಯುವುದು ಒಳ್ಳೆಯದು.

 ಲಸಿಕೆಗಳನ್ನು ಹಾಕಿಸಿಕೊಳ್ಳುವುದರಿಂದ ಶರೀರದ ರೋಗ ನಿರೋಧಕ ಶಕ್ತಿಯ ಕಾರ್ಯನಿರ್ವಹಣೆೆ ಉತ್ತಮ ಗೊಳ್ಳುತ್ತದೆ ಮತ್ತು ಸೋಂಕುಗಳ ವಿರುದ್ಧ ಹೋರಾಡುವ ಆ್ಯಂಟಿ ಬಯಾಟಿಕ್‌ಗಳ ಉತ್ಪಾದನೆಯು ಹೆಚ್ಚುತ್ತದೆ. ಉದಾಹರಣೆಗೆ ನ್ಯುಮೊಕೋಕಲ್ ವ್ಯಾಕ್ಸಿನ್ ನ್ಯುಮೋನಿಯಾಕ್ಕೆ ಕಾರಣವಾಗುವ ಬ್ಯಾಕ್ಟೀರೀಯಾಗಳ ವಿರುದ್ಧ ಹೋರಾಡುವ ಆ್ಯಂಟಿಬಾಡಿಗಳನ್ನು ಉತ್ಪಾದಿಸುತ್ತದೆ. ಹೀಗಾಗಿ ನೀವು ಈ ಬ್ಯಾಕ್ಟೀರಿಯಾಗಳ ಸಂಪರ್ಕಕ್ಕೆ ಬಂದರೂ ಅವುಗಳ ವಿರುದ್ಧ ಹೋರಾಡುವ ಆ್ಯಂಟಿಬಾಡಿಗಳು ಈಗಾಗಲೇ ನಿಮ್ಮ ಶರೀರದಲ್ಲಿರು ವುದರಿಂದ ನೀವು ಸೋಂಕಿಗೆ ಗುರಿಯಾಗುವ ಸಾಧ್ಯತೆಗಳು ಕಡಿಮೆಯಾಗಿರುತ್ತವೆ. ಲಸಿಕೆಗಳನ್ನು ತಜ್ಞವೈದ್ಯರ ಸಲಹೆಯ ಮೇರೆಗೇ ಹಾಕಿಸಿಕೊಳ್ಳಬೇಕು ಎನ್ನುವದನ್ನು ನೆನಪಿಡಿ.

ವಯಸ್ಕರಿಗೆ ಸಾಮಾನ್ಯ ಲಸಿಕೆಗಳು

ಇನ್‌ಫ್ಲುಯೆಂಜಾ ವ್ಯಾಕ್ಸಿನ್,ನ್ಯುಮೋಕೋಕಲ್ ವ್ಯಾಕ್ಸಿನ್,ಹ್ಯೂಮನ್ ಪಾಪಿಲೋಮಾವೈರಸ್ ವ್ಯಾಕ್ಸಿನ್, ಧನುರ್ವಾತ,ಗಂಟಲಮಾರಿ ಮತ್ತು ನಾಯಿಕೆಮ್ಮಿನ ವಿರುದ್ಧ ರಕ್ಷಣೆ ನೀಡುವ ಟಿಡಿ ವ್ಯಾಕ್ಸಿನ್,ಹೆಪಟೈಟಿಸ್ ವ್ಯಾಕ್ಸಿನ್ ಇವು ವಯಸ್ಕರು ಹಾಕಿಸಿಕೊಳ್ಳಬಹುದಾದ ಸಾಮಾನ್ಯ ಲಸಿಕೆಗಳಾಗಿವೆ. ಇತರ ಲಸಿಕೆಗಳಲ್ಲಿ ಟೈಫಾಯಿಡ್,ಸರ್ಪಸುತ್ತು,ಮಿದುಳು ಪೊರೆಯೂತ, ಹೆಪಟೈಟಿಸ್ ಎ ಇತ್ಯಾದಿ ವ್ಯಾಕ್ಸಿನ್‌ಗಳು ಸೇರಿವೆ. ವಯಸ್ಕರು ಸ್ಟೆರಾಯ್ಡೆಗಳನ್ನು ತೆಗೆದುಕೊಳ್ಳುತ್ತಿದ್ದರೆ,ಸ್ವರಕ್ಷಿತ ಕಾಯಿಲೆಗಳಿಂದ ಬಳಲುತ್ತಿದ್ದರೆ ಮತ್ತು ಸಾಂಕ್ರಾಮಿಕ ರೋಗಗಳಿರುವ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದರೆ ಸೂಕ್ತ ಲಸಿಕೆಗಳನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)