varthabharthi

ಕರ್ನಾಟಕ

ದಲಿತರಿಂದ ಪ್ರತಿಭಟನೆ ಎಚ್ಚರಿಕೆ: ಖಾಸಗಿ ಕಾರ್ಯಕ್ರಮಕ್ಕೆ ಅನಂತಕುಮಾರ್ ಹೆಗಡೆ ಗೈರು

ವಾರ್ತಾ ಭಾರತಿ : 6 Dec, 2018

ಮೈಸೂರು,ಡಿ.6: ಕ್ರೆಡಾಯ್ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದ ಉದ್ಘಾಟನೆಗೆ ಬರಬೇಕಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ದಲಿತ ಸಂಘರ್ಷ ಸಮಿತಿಯ ಪ್ರತಿಭಟನೆಗೆ ಹೆದರಿ ಗೈರಾಗಿದ್ದಾರೆ ಎನ್ನಲಾಗಿದೆ.

ಕೆಎಸ್ಓಯು ಘಟಿಕೋತ್ಸವ ಸಭಾಂಗಣದಲ್ಲಿ ಗುರುವಾರದಿಂದ ಎರಡು ದಿನಗಳ ವರೆಗೆ ನಡೆಯುತ್ತಿರುವ “ನ್ಯೂ ಇಂಡಿಯಾ ಸಮ್ಮಿಟ್” ಕಾರ್ಯಕ್ರಮದ ಉದ್ಘಾಟನೆಗೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಬರಬೇಕಿತ್ತು. ಆದರೆ ದಲಿತ ಸಂಘರ್ಷ ಸಮಿತಿ ಘೇರಾವ್ ಹಾಕಿ ಪ್ರತಿಭಟಿಸುತ್ತಾರೆ ಎಂಬ ವಿಚಾರವನ್ನು ಗುಪ್ತಚರ ಇಲಾಖೆ ಮೂಲಕ ತಿಳಿದ ಅನಂತಕುಮಾರ್ ಹೆಗಡೆ ಕಾರ್ಯಕ್ರಮದಿಂದಲೇ ದೂರ ಉಳಿದರು ಎಂದು ತಿಳಿದುಬಂದಿದೆ.

ಈ ಹಿಂದೆ ಮೈಸೂರಿನಲ್ಲಿ ಬಿಜೆಪಿ ಏರ್ಪಡಿಸಿದ್ದ ದಲಿತರ ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ಧ ಪ್ರತಿಭಟಿಸಿದ್ದ ದಲಿತರ ವಿಚಾರ ಅರಿತು ಕೇಂದ್ರ ಸಚಿವ ಅನಂತಕುಮಾರ್ ಕಾರ್ಯಕ್ರಮಕ್ಕೆ ಬಾರಲಿಲ್ಲ ಎನ್ನಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)