ಯುಎಇ: ಮಹಿಳೆಗೆ ಕಿರುಕುಳ ಆರೋಪ; ಗಾಯಕ ಮಿಕಾ ಸಿಂಗ್ ವಶಕ್ಕೆ
ಹೊಸದಿಲ್ಲಿ,ಡಿ.6: ಮಹಿಳೆಯೋರ್ವಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ವಿವಾದಾತ್ಮಕ ಗಾಯಕ ಮಿಕಾ ಸಿಂಗ್ ಅವರನ್ನು ಯುಎಇ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
2016ರಲ್ಲಿ ಮುಂಬೈನ ಮಾಡೆಲ್ವೋರ್ವಳು ಮಿಕಾ ವಿರುದ್ಧ ಲೈಂಗಿಕ ಕಿರುಕುಳದ ದೂರನ್ನು ದಾಖಲಿಸಿದ್ದಳು. ಮಿಕಾ ಆಕೆಯ ವಿರುದ್ಧ ಹಫ್ತಾ ವಸೂಲಿ ಆರೋಪ ಹೊರಿಸಿ ಪ್ರತಿದೂರು ದಾಖಲಿಸಿದ್ದರು. ಇದಕ್ಕೂ ಒಂದು ವರ್ಷ ಮೊದಲು ತನ್ನ ಸಂಗೀತ ಕಾರ್ಯಕ್ರಮದಲ್ಲಿ ವೈದ್ಯರೋರ್ವರ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಮಿಕಾರನ್ನು ಬಂಧಿಸಿ ನಂತರ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿತ್ತು.
ಕೆಲವು ವರ್ಷಗಳ ಹಿಂದೆ ಅನುಮತಿಸಲ್ಪಟ್ಟ ಮಿತಿಗಿಂತ ಹೆಚ್ಚಿನ ಭಾರತೀಯ ಮತ್ತು ವಿದೇಶಿ ಕರೆನ್ಸಿ ಹೊಂದಿದ್ದಕ್ಕಾಗಿ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿಲಾಗಿತ್ತು.
ಬಾಲಿವುಡ್ನ ಜನಪ್ರಿಯ ಗಾಯಕರಲ್ಲೋರ್ವರಾಗಿರುವ ಮಿಕಾ 2006ರಲ್ಲಿ ತನ್ನ ಹುಟ್ಟುಹಬ್ಬದ ಪಾರ್ಟಿಯಲ್ಲಿ ತನ್ನನ್ನು ಬಲವಂತದಿಂದ ಚುಂಬಿಸಿದ್ದರೆಂದು ನಟಿ ರಾಖಿ ಸಾವಂತ್ ಆರೋಪಿಸಿದ್ದರು.
Next Story