6 ಬ್ಯಾಂಕ್ ದರೋಡೆಕೋರರ ಹತ್ಯೆ: ಮಗು ಸೇರಿ ಐವರು ಒತ್ತೆಯಾಳುಗಳು ಮೃತ್ಯು
ರಿಯೋ ಡಿ ಜನೈರೋ (ಬ್ರೆಝಿಲ್), ಡಿ. 8: ಬ್ರೆಝಿಲ್ನ ಸಿಯರ ರಾಜ್ಯದ ಮಿಲಾಗ್ರಿಸ್ ನಗರದಲ್ಲಿ ಶುಕ್ರವಾರ ಎರಡು ಬ್ಯಾಂಕ್ಗಳ ಮೇಲೆ ದರೋಡೆಕೋರರು ನಡೆಸಿದ ದಾಳಿಗಳಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ 6 ದರೋಡೆಕೋರರು ಮತ್ತು ಒಂದು ಮಗು ಸೇರಿದಂತೆ ಐವರು ಒತ್ತೆಯಾಳುಗಳು ಸೇರಿದ್ದಾರೆ.
ಶುಕ್ರವಾರ ಮುಂಜಾನೆ ಮಿಲಾಗ್ರಿಸ್ ನಗರದಲ್ಲಿ ಶಸ್ತ್ರಧಾರಿ ದರೋಡೆಕೋರರು ಮತ್ತು ಪೊಲೀಸರ ನಡುವೆ ಭೀಕರ ಗುಂಡಿನ ಕಾಳಗ ನಡೆದಾಗ ಈ ಸಾವು-ನೋವುಗಳು ಸಂಭವಿಸಿವೆ.
ಮಗು ಸೇರಿದಂತೆ ಮೃತಪಟ್ಟ ನಾಲ್ಕು ಒತ್ತೆಯಾಳುಗಳು ಒಂದೇ ಕುಟುಂಬದವರು ಎಂದು ಮಿಲಾಗ್ರಿಸ್ ಮೇಯರ್ ಲೀಲ್ಸನ್ ಲ್ಯಾಂಡಿನ್ ಹೇಳಿದ್ದಾರೆ. ಅವರು ಸಮೀಪದ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದಾಗ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ದರೋಡೆಕೋರರು ಅವರನ್ನು ಒತ್ತೆಸೆರೆಯಲ್ಲಿರಿಸಿದರು.
‘‘ಕ್ರಿಮಿನಲ್ಗಳು ಒತ್ತೆಯಾಳುಗಳನ್ನು ಕೊಂದರು, ಪೊಲೀಸರು ಕ್ರಿಮಿನಲ್ಗಳನ್ನು ಕೊಂದರು’’ ಎಂದು ಲ್ಯಾಂಡಿನ್ ತಿಳಿಸಿದರು.
Next Story