ಖಿದ್ಮತುಲ್ ಇಸ್ಲಾಂ ಅಸೋಸಿಯೆಷನ್ ಕೋಡಿಜಾಲ್: ಜಿಸಿಸಿ ದಮಾಮ್ ಘಟಕದ ಮಹಾಸಭೆ
ದಮಾಮ್, ಡಿ. 12: ಖಿದ್ಮತುಲ್ ಇಸ್ಲಾಂ ಅಸೋಸಿಯೆಷನ್ ಕೋಡಿಜಾಲ್ ಇದರ ಜಿಸಿಸಿ ದಮಾಮ್ ಘಟಕದ 11ನೇ ವಾರ್ಷಿಕ ಮಹಾಸಭೆಯು ಉಸ್ಮಾನ್ ಕೋಡಿಜಾಲ್ ಅಧ್ಯಕ್ಷತೆಯಲ್ಲಿ ದಮಾಮ್ ಹೊರವಲಯದ ಅಲ್ ಮುಖಾಯಿಮ್ ಚಳಿಗಾಲದ ಕ್ಯಾಮ್ಪ್ ನಲ್ಲಿ ಇತ್ತೀಚೆಗೆ ನಡೆಯಿತು.
ಈ ಸಂದರ್ಭ ಸಮಿತಿಯ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ನಂತರ ಸಮಿತಿಯ ಸಭಾಧ್ಯಕ್ಷರು ಪ್ರಸಕ್ತ ವರ್ಷದ ಸಮಿತಿಯನ್ನು ಬರ್ಕಾಸ್ತುಗೊಳಿಸಿದರು.
ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಇಮ್ತಿಯಾಝ್ ಕೋಡಿಜಾಲ್, ಉಪಾಧ್ಯಕ್ಷರಾಗಿ ಯಾಸಿರ್ ಜುಬೈಲ್, ಅನ್ವರ್ ಪಾವೂರ್, ಕಾರ್ಯದರ್ಶಿಯಾಗಿ ನವಾಝ್ ಕೋಡಿಜಾಲ್ ಎಬಿಎಚ್, ಕೋಶಾಧಿಕಾರಿಯಾಗಿ ತನ್ವಿರ್ ಜುಬೈಲ್, ಜತೆ ಕಾರ್ಯದರ್ಶಿಗಳಾಗಿ ಖಾದರ್ ಎಜಿಟಿ, ಅಷ್ಫರ್ ಕೋಡಿಜಾಲ್, ಸಂಘಟನಾ ಕಾರ್ಯದರ್ಶಿಯಾಗಿ ಸಾದಿಕ್ ಕೋಡಿಜಾಲ್, ಫಾರೂಕ್ ಪಜೀರ್, ರಿಯಾದ್ ವಲಯ ಕಾರ್ಯದರ್ಶಿಯಾಗಿ ಅನ್ಸಾರ್ ರಿಯಾದ್, ಪತ್ರಿಕಾ ಕಾರ್ಯದರ್ಶಿಯಾಗಿ ಅಝೀಝ್ ಜುಬೈಲ್ ಅವರನ್ನು ನೇಮಿಸಲಾಯಿತು ಹಾಗೂ ಉಳಿದ ಸದಸ್ಯರನ್ನು ಕಾರ್ಯಾಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಲಾಯಿತು.
ಮುಖ್ಯ ಅತಿಥಿ ಅಶ್ರಫ್ ಕೋಡಿಜಾಲ್, ಅಧ್ಯಕ್ಷ ಅನ್ವರ್ ಕೋಡಿಜಾಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರಿಯಾಝ್ ಎಜಿಟಿ ಸಲಹೆ ನೀಡಿದರು. ಅಝರ್ ಕೋಡಿಜಾಲ್ ಲೆಕ್ಕ ಪತ್ರ ಮಂಡಿಸಿದರು. ಆಸೀಫ್ ಕೋಡಿಜಾಲ್ ವರದಿ ವಾಚಿಸಿದರು. ನವಾಝ್ ಎಬಿಎಚ್ ವಂದಿಸಿ, ಅಝೀಝ್ ಜುಬೈಲ್ ಕಾರ್ಯಕ್ರಮ ನಿರೂಪಿಸಿದರು. ನಂತರ ಕ್ರೀಡಾಕೂಟ ಹಾಗು ಇನ್ನಿತರ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸಿದ್ದಿಕ್ ಕೋಡಿಜಾಲ್ ಹಾಗೂ ಯಾಸಿರ್ ಕೋಡಿಜಾಲ್ ಸಹಕರಿಸಿದರು. ಅನ್ಸಾರ್ ಕೊಡಿಜಾಲ್ ಸ್ವಾಗತಿಸಿದರು.