varthabharthi

ಕರಾವಳಿ

ಎಸ್ಸೆಸ್ಸೆಫ್ ಅಳಕೆಮಜಲು ಶಾಖೆಗೆ ಪದಾಧಿಕಾರಿಗಳ ಆಯ್ಕೆ

ವಾರ್ತಾ ಭಾರತಿ : 15 Dec, 2018

ಇಡ್ಕಿದು, ಡಿ.15: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್(ಎಸ್ಸೆಸ್ಸೆಫ್)ನ ಅಳಕೆಮಜಲು ಘಟಕದ ಮಹಾಸಭೆಯು ಇತ್ತೀಚೆಗೆ ಶಾಖಾಧ್ಯಕ್ಷ ಅಶ್ರಫ್ ಅಧ್ಯಕ್ಷತೆಯಲ್ಲಿ ಇಲ್ಲಿನ ಹಿದಾಯತುಲ್ ಇಸ್ಲಾಂ ಮದ್ರಸ ಹಾಲ್ ನಲ್ಲಿ ನಡೆಯಿತು.

ಸ್ಥಳೀಯ ಖತೀಬ್ ಮುಹಮ್ಮದ್ ಶರೀಫ್ ಸಖಾಫಿ ಸಭೆಯನ್ನು ಉದ್ಘಾಟಿಸಿದರು. ಕಾರ್ಯದರ್ಶಿ ಉನೈಸ್ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ವೀಕ್ಷಕರಾಗಿ ವಿಟ್ಲ ಡಿವಿಶನ್ ಉಪಾಧ್ಯಕ್ಷ ರಹೀಮ್ ಸಖಾಫಿ ಆಗಮಿಸಿದ್ದರು. ಸಂಘಟನೆಯ ಅನಿವಾರ್ಯತೆಯ ಬಗ್ಗೆ ಸಿದ್ದೀಕ್ ಹಾಜಿ ಕಬಕ ತರಗತಿ ನಡೆಸಿದರು. ಹಾಲಿ ಸಮಿತಿಯನ್ನು ಬರ್ಕಾಸ್ತುಗೊಳಿಸಿ ನೂತನ ಸಮಿತಿ ರಚಿಸಲಾಯಿತು.

ನೂತನ ಪದಾಧಿಕಾರಿಗಳು:

ಅಧ್ಯಕ್ಷರಾಗಿ ಹೈದರ್ ಅಳಕೆಮಜಲು, ಉಪಾಧ್ಯಕ್ಷರಾಗಿ ನಝೀರ್ ಬಡ್ಡಂಗರೆ ಮತ್ತು ಜಾಬೀರ್ ಅಳಕೆಮಜಲು, ಪ್ರಧಾನ ಕಾರ್ಯದರ್ಶಿಯಾಗಿ ಹಾರಿಸ್ ಕೋಣಿಮಾರ್, ಜೊತೆ ಕಾರ್ಯದರ್ಶಿಗಳಾಗಿ ಉನೈಸ್ ಮತ್ತು ರಿಝ್ವಾನ್ ನಡುಮಜಲು, ಕೋಶಾಧಿಕಾರಿಯಾಗಿ ಬಾತಿಷ್ ಅಳಕೆಮಜಲು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ 15 ಮಂದಿಯನ್ನು  ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಪ್ರಮುಖರಾದ ದಾವೂದ್ ಅಶ್ರಫಿ, ಅಝ್ಹರುದ್ದೀನ್ ಫಾಳಿಲಿ, ವಿಟ್ಲ ಸೆಕ್ಟರ್ ಕಾರ್ಯದರ್ಶಿ ಸೈಫುದ್ದೀನ್ ಅಳಕೆಮಜಲು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಉನೈಸ್ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಹಾರಿಸ್ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)