‘ದುಬೈ ಡ್ಯೂಟಿ ಫ್ರೀ’ಗೆ ‘ಜಿಟಿ ಟೆಸ್ಟೆಡ್ ಪ್ರಶಸ್ತಿ’
ದುಬೈ, ಡಿ. 16: ದುಬೈ ಡ್ಯೂಟಿ ಫ್ರೀ ಎರಡು ಪ್ರಮುಖ ಗ್ಲೋಬಲ್ ಟ್ರಾವೆಲರ್ ಟೆಸ್ಟೆಡ್ ಪ್ರಶಸ್ತಿ ಪಡೆದುಕೊಂಡಿದೆ. ‘ಜಗತ್ತಿನಲ್ಲಿ ಅತ್ಯುತ್ತಮ ಡ್ಯೂಟಿ ಫ್ರೀ ಶಾಪಿಂಗ್’ ಪ್ರಶಸ್ತಿಯನ್ನು ಸತತ 12ನೇ ವರ್ಷ ಪಡೆದುಕೊಳ್ಳುತ್ತಿದೆ. ‘‘ಮದ್ಯ ಪ್ರಾಚ್ಯದಲ್ಲಿ ಅತ್ಯುತ್ತಮ ಡ್ಯೂಟಿ ಫ್ರೀ ಶಾಪಿಂಗ್’’ ಪ್ರಶಸ್ತಿಯನ್ನು ಸತತ ಎರಡನೇ ವರ್ಷ ಪಡೆದುಕೊಳ್ಳುತ್ತಿದೆ.
ಪ್ರಶಸ್ತಿ ಪ್ರಧಾನ ಸಮಾರಂಭ ಕ್ಯಾಲಿಫೋರ್ನಿಯಾದ ಲಾಸ್ ಎಂಜಲ್ಸ್ನಲ್ಲಿರುವ ‘ದಿ ಪೆನಿನ್ಸುಲಾ ಹೊಟೇಲ್’ಲ್ಲಿ ಡಿ. 12ರಂದು ನಡೆಯಿತು.
ಐಷಾರಾಮಿ ಉದ್ಯಮಗಳು ಹಾಗೂ ವಿಹಾರ ಪ್ರವಾಸಿಗರಿಗಿರುವ ಎಎಎಂ ಮಾನ್ಯತೆ ಪಡೆದ ಮಾಸ ಪತ್ರಿಕೆ ‘ಗ್ಲೋಬಲ್ ಟ್ರಾವೆಲರ್’ನ 15ನೇ ವಾರ್ಷಿಕ ಜಿಟಿ ಟೆಸ್ಟೆಡ್ ರೀಡರ್ ಸರ್ವೇ ಅವಾರ್ಡ್ಗಳಿಗೆ ‘ದುಬೈ, ಡ್ಯೂಟಿ ಫ್ರೀ’ ಪಾತ್ರವಾಗಿದೆ. ಪತ್ರಿಕೆಯ ಓದುಗರ ಮತ ಆಧರಿಸಿ ಈ ಪ್ರಶಸ್ತಿ ನೀಡಲಾಗಿದೆ. 2018ರ ಜನವರಿ ಹಾಗೂ ಸೆಪ್ಟಂಬರ್ ನಡುವೆ 22 ಸಾವಿರಕ್ಕಿಂತಲೂ ಅಧಿಕ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.
ಮಧ್ಯ ಪ್ರಾಚ್ಯದಲ್ಲಿ ಮಾತ್ರವಲ್ಲದೆ, ಜಗತ್ತಿನಲ್ಲೇ ಪರಿಗಣಿಸಿರುವುದರಿಂದ ‘ದುಬೈ ಡ್ಯೂಟಿ ಫ್ರೀ’ಗೆ ಅಭೂತಪೂರ್ವ ಗೌರವ ದೊರಕಿದೆ ಎಂದು ‘ದುಬೈ ಡ್ಯೂಟಿ ಫ್ರೀ’ ಕಾರ್ಯಕಾರಿ ಉಪಾಧ್ಯಕ್ಷ ಹಾಗೂ ಸಿಇಒ ಕೋಮ್ ಮೆಕ್ಲಾಘ್ಲಿನ್ ಹೇಳಿದ್ದಾರೆ.
ದುಬೈ ಡ್ಯೂಟಿ ಫ್ರೀ ಮಾರ್ಕೆಟಿಂಗ್ನ ಹಿರಿಯ ಉಪಾಧ್ಯಕ್ಷ ಸಿನೀದ್ ಎಲ್ ಸಿಬಾಯಿ ಪ್ರಶಸ್ತಿ ಸ್ವೀಕರಿಸಿದರು.