‘ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ಟ್ರೈಲರ್ ಬಿಡುಗಡೆ
ಹೊಸದಿಲ್ಲಿ, ಡಿ.27: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜೀವನವನ್ನಾಧರಿಸಿದ, ಅನುಪಮ್ ಖೇರ್ ನಟನೆಯ ಬಹುನಿರೀಕ್ಷಿತ ‘ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಮನಮೋಹನ್ ಸಿಂಗ್ ಮಾಧ್ಯಮ ಸಲಹೆಗಾರ ಸಂಜಯ ಬಾರು ಅವರ ಪಾತ್ರದಲ್ಲಿ ಅಕ್ಷಯ್ ಖನ್ನಾ ನಟಿಸಿದ್ದಾರೆ. ಸೋನಿಯಾ ಗಾಂಧಿ ಪಾತ್ರದಲ್ಲಿ ಜರ್ಮನ್ ನಟಿ ಸುಝಾನೆ ಬರ್ನರ್ಟ್, ಪ್ರಿಯಾಂಕಾ ಗಾಂಧಿ ಪಾತ್ರದಲ್ಲಿ ಆಹನಾ ಕುಮಾರ, ರಾಹುಲ್ ಗಾಂಧಿ ಪಾತ್ರದಲ್ಲಿ ಅರ್ಜುನ್ ಮಾಥುರ್ ನಟಿಸಿದ್ದಾರೆ.
Next Story