varthabharthi


ಮಾಹಿತಿ - ಮಾರ್ಗದರ್ಶನ

ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ವಾರ್ತಾ ಭಾರತಿ : 5 Jan, 2019

ವಿದ್ಯಾರ್ಥಿವೇತನ (ಪ್ರತಿಭೆ ಆಧಾರಿತ):
ಕಿನ್‌ಶಿಪ್ ಕನ್ಸರ್ವೇಶನ್ ಫೆಲೊ 2019
ವಿವರ:
ಪರಿಸರ ಸವಾಲುಗಳನ್ನು ಎದುರಿಸಲು ಇರುವ ಮಾರುಕಟ್ಟೆ ಆಧಾರಿತ ಸಂರಕ್ಷಣಾ ಯೋಜನೆಗಳನ್ನು ಅನುಷ್ಠಾನಗೊಳಿಸಲು ಒಂದು ತಿಂಗಳ ಸನಿವಾಸ ತರಬೇತಿ ಕಾರ್ಯಕ್ರಮ. ವಾಶಿಂಗ್ಟನ್‌ನ ಬೆಲ್ಲಿಂಗ್ಹಾಮ್‌ನ ವೆಸ್ಟರ್ನ್ ವಿವಿ ಕ್ಯಾಂಪಸ್‌ನಲ್ಲಿ ತರಬೇತಿ ಕಾರ್ಯಕ್ರಮ ನಡೆಯಲಿದೆ.
ಅರ್ಹತೆ:
ಇಂಗ್ಲಿಷ್ ಭಾಷೆಯಲ್ಲಿ ಪ್ರಭುತ್ವವಿರುವ, ಐದು ವರ್ಷದ ಸ್ನಾತಕೋತ್ತರ ಕ್ಷೇತ್ರ ಅನುಭವ ಇರುವ, ಸಂರಕ್ಷಣಾ ವೃತ್ತಿಯಲ್ಲಿರುವರು (ಕನ್ಸರ್ವೇಶನ್ ಪ್ರಾಕ್ಟಿಷಿನರ್) ಅರ್ಜಿ ಸಲ್ಲಿಸಬಹುದು.
ನೆರವು:
ಒಂದು ತಿಂಗಳಿಗೆ 6 ಸಾವಿರ ಡಾಲರ್ ಮೊತ್ತ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜನವರಿ 8, 2019
ಅರ್ಜಿ: 
 ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ಜಾಲತಾಣ: http://www.b4s.in/bharati/KCF1

*************

ವಿದ್ಯಾರ್ಥಿವೇತನ
(ಅರ್ಹತೆ ಮತ್ತು ಆಧಾರಿತ):

ಕಾರ್ಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಟರ್‌ನ್ಯಾಷನಲ್ ಸ್ಕಾಲರ್‌ಶಿಪ್ 2019, ಐರ್ಲೆಂಡ್.
ವಿವರ:

ಪದವಿ ಮತ್ತು ಸ್ನಾತಕೋತ್ತರ ಪದವಿ ಅಧ್ಯಯನ ನಡೆಸಲು ಆಸಕ್ತರು ಅರ್ಜಿ ಸಲ್ಲಿಸಬಹುದು.

ಅರ್ಹತೆ:
 ಪದವಿ ತರಗತಿಗೆ: ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ ಕನಿಷ್ಠ ಶೇ.75 ಅಂಕಗಳೊಂದಿಗೆ 12ನೇ ತರಗತಿ ಪಾಸಾಗಿರುವವರು, ಸ್ನಾತಕೋತ್ತರ ಪದವಿಗೆ- ಕನಿಷ್ಠ ಪ್ರಥಮ ದರ್ಜೆ ಪದವೀಧರರು. 6.0 ಐಇಎಲ್‌ಟಿಸ್ ಅಂಕ (ಯಾವುದೇ ವಿಭಾಗದಲ್ಲಿ 5.5ಕ್ಕಿಂತ ಕಡಿಮೆ ಇರಬಾರದು) ಮತ್ತು 80 ಟಿಒಇಎಫ್‌ಎಲ್ ಅಂಕ ಕಡ್ಡಾಯ.
ನೆರವು:
ಆಯ್ಕೆಯಾದ ಅಭ್ಯರ್ಥಿಗಳಿಗೆ ಶಿಕ್ಷಣ ಶುಲ್ಕದಲ್ಲಿ ಶೇ.25ರಷ್ಟು ಶುಲ್ಕ ಮನ್ನಾ, ಉತ್ತಮ ಶಿಕ್ಷಕ-ವಿದ್ಯಾರ್ಥಿಯ ಅನುಪಾತ ಹಾಗೂ ಇತರ ಸೌಕರ್ಯ ಕಲ್ಪಿಸಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜನವರಿ 10, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ಜಾಲತಾಣ: http://www.b4s.in/bharati/CIO3
*****************
ವಿದ್ಯಾರ್ಥಿವೇತನ
 (ಆದಾಯ ಆಧಾರಿತ):

ಸ್ಕಾಲ್ ಸ್ಕಾಲರ್‌ಶಿಪ್ 2019
ವಿವರ:

 ಎಂಬಿಎ ಪದವಿ ಪಡೆಯಲು, ನಾಯಕತ್ವ ಮತ್ತು ಉದ್ಯಮ ಕೌಶಲ್ಯ ಬೆಳೆಸಿಕೊಳ್ಳಲು ಆಸಕ್ತರಿರುವವರು ಬ್ರಿಟನ್‌ನ ಆಕ್ಸ್‌ಫರ್ಡ್ ವಿವಿಯಲ್ಲಿ ವಿಶ್ವದ ಖ್ಯಾತ ಉದ್ಯಮಿಗಳು, ಚಿಂತಕರು ಹಾಗೂ ಹೂಡಿಕೆದಾರರನ್ನು ಭೇಟಿಯಾಗಲು ಅವಕಾಶ.
ಅರ್ಹತೆ:
 ಎಂಬಿಎ ಕಲಿಯಲು ಆಸಕ್ತರಾಗಿರುವ, ಸಾಮಾಜಿಕ ಉದ್ಯಮಶೀಲತೆಯಲ್ಲಿ ಉತ್ತಮ ಸಾಧನೆ ದಾಖಲಿಸಿರುವ, ಸಂಸ್ಥೆಯೊಂದರ ಆಡಳಿತ ವ್ಯವಸ್ಥಾಪಕನಾಗಿ ಕನಿಷ್ಠ 3 ವರ್ಷ ಕಾರ್ಯ ನಿರ್ವಹಿಸಿದವರು ಅರ್ಜಿ ಸಲ್ಲಿಸಬಹುದು.
ನೆರವು:
ಎಂಬಿಎ ಕಾರ್ಯಕ್ರಮದ ಸಂಪೂರ್ಣ ಶುಲ್ಕ ಭರಿಸಲಾಗುವುದು. ಅಲ್ಲದೆ ಕನಿಷ್ಠ 14,777 ಪೌಂಡ್ ಮೊತ್ತವನ್ನು ಜೀವನ ವೆಚ್ಚವಾಗಿ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:
ಜನವರಿ 11, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಅಥವಾ ಅಂಚೆ ಮೂಲಕ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/TSS4

*******************
ವಿದ್ಯಾರ್ಥಿವೇತನ
(ಆದಾಯ ಮತ್ತು ಅರ್ಹತೆ ಆಧಾರಿತ):
 ಕೆಟಿಎಚ್ ಇಂಡಿಯಾ ಸ್ಕಾಲರ್‌ಶಿಪ್ 2019

ವಿವರ:
ಪದವಿ ಪೂರೈಸಿದ, ಸ್ವೀಡನ್‌ನ ಕೆಟಿಎಚ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆ:
ಶೈಕ್ಷಣಿಕ ಶ್ರೇಷ್ಠತೆಯೊಂದಿಗೆ ಪದವಿ ಪೂರೈಸಿದವರು ಅರ್ಜಿ ಸಲ್ಲಿಸಬಹುದು.
ನೆರವು:
ಸಂಪೂರ್ಣ ಬೋಧನಾ ಶುಲ್ಕ ಮನ್ನಾ ಮತ್ತು 10 ತಿಂಗಳಿನ ಅವಧಿಗೆ ಮಾಸಿಕ ಭತ್ತೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:
ಜನವರಿ 15, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/KIS3
11111111111111111
ವಿದ್ಯಾರ್ಥಿವೇತನ
(ಪ್ರತಿಭೆ ಆಧಾರಿತ):
ಸ್ಟೈಪೆಂಡಿಯಮ್ ಹಂಗೇರಿಕಮ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2019, ಹಂಗೇರಿ

ವಿವರ:
 ಉನ್ನತ ಅಧ್ಯಯನ ನಡೆಸಲು ಆಸಕ್ತ ಪ್ರತಿಭಾವಂತ ಭಾರತೀಯ ವಿದ್ಯಾರ್ಥಿಗಳಿಗೆ ಯುಜಿಸಿಯು ಹಂಗೇರಿಯ ಸಹಭಾಗಿತ್ವದಲ್ಲಿ , ಹಂಗೇರಿಯಲ್ಲಿ ಪದವಿ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆಯಲು ಅವಕಾಶ.
ಅರ್ಹತೆ:
ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿ ಉತ್ತಿರ್ಣರಾಗಿರಬೇಕು. ಟೆಂಪಸ್ ಪಬ್ಲಿಕ್ ಫೌಂಡೇಶನ್‌ಗೆ ಅರ್ಜಿ ಸಲ್ಲಿಸಿರಬೇಕು.
ನೆರವು:

ಬೋಧನಾ ಶುಲ್ಕದಿಂದ ವಿನಾಯಿತಿ, ತಿಂಗಳ ಸ್ಟೈಪೆಂಡ್ ಹಾಗೀ ಒಬ್ಬ ವ್ಯಕ್ತಿಗೆ ಒಂದು ವರ್ಷಕ್ಕೆ 65 ಸಾವಿರ ಎಚ್‌ಯುಎಫ್ ಮೊತ್ತದ ವೈದ್ಯಕೀಯ ವಿಮೆ ಸೌಲಭ್ಯ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:
ಜನವರಿ 15, 2019
ಅರ್ಜಿ: ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು..
ಜಾಲತಾಣ: http://www.b4s.in/bharati/SHS5

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)